Slide
Slide
Slide
previous arrow
next arrow

ಜೆಸಿಬಿ, ಹಿಟಾಚಿ ಚಾಲಕ-ಮಾಲಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ

300x250 AD

ಶಿರಸಿ: ಇಂದಿನ ಯಾಂತ್ರಿಕೃತ ಜಗತ್ತಿನಲ್ಲಿ ಜೆಸಿಬಿ, ಹಿಟಾಚಿಗಳು ಮಹತ್ವದ ಪಾತ್ರವಹಿಸುತ್ತದೆ. ಶಿರಸಿಯಂತಹ ನಗರ ಕೂಡಾ ಆಧುನಿಕರಣಕ್ಕೆ ಒತ್ತು ಕೊಟ್ಟಿರುವುದು ಇಷ್ಟೊಂದು ಸಂಖ್ಯೆಯಲ್ಲಿರುವ ಜೆಸಿಬಿ ಮತ್ತು ಹಿಟಾಚಿಯಿಂದ ಕಂಡು ಬರುತ್ತದೆ ಎಂದು ಡಿಎಫ್ಓ ಅಜ್ಜಯ್ಯ ಹೇಳಿದರು.

ನಗರದಲ್ಲಿ ಜೆಸಿಬಿ ಹಿಟಾಚಿ ಚಾಲಕ ಮಾಲಕರ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವಾಹನಗಳು ಆಧುನಿಕ ಯಂತ್ರೋಪಕರಣಗಳಿಂದ ಮಾಡಲ್ಪಟ್ಟಿರುವುದರಿಂದ ಮನುಷ್ಯನಿಂದಾಗದ ಕೆಲಸವನ್ನು ಬಹು ಸುಲಭವಾಗಿ ಮಾಡುತ್ತದೆ. ಕಾರ್ಮಿಕರು ಸಿಗದೇ ಇರುವ ಇಂದಿನ ಕಾಲದಲ್ಲಿ ಈ ವಾಹನಗಳ ಉಪಯೋಗವನ್ನು ಪ್ರತಿಯೊಂದು ಕಾಮಗಾರಿಗಳಲ್ಲೂ ಬಳಕೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯಲ್ಲೂ ಕೂಡಾ ಹಿಟಾಚಿ, ಜೆಸಿಬಿ ಬಳಕೆಯನ್ನು ಹೆಚ್ಚಾಗಿ ಮಾಡಲಾಗುತ್ತಿದೆ. ಕೆರೆ,ಕೃಷಿ ಹೊಂಡ, ಗಟಾರ ಹಾಗು ಪ್ರಕೃತಿ ವಿಕೋಪವಾದ ಸಂದರ್ಭದಲ್ಲಿಯೂ ಈ ವಾಹನಗಳ ಬಳಕೆ ಅತೀ ಅವಶ್ಯವಾಗಿ ಬೇಕಾಗುತ್ತದೆ. ಈ ವಾಹನದ ಮಾಲಕ ಚಾಲಕರು ಆರ್.ಟಿ.ಓ ನಿಂದ ಪರವಾನಗಿ ಪಡೆದು ಸಕಾಲಕ್ಕೆ ವಿಮೆ ತುಂಬುತ್ತ ಕೆಲಸಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಪಾಯಕ್ಕೆ ಸಿಕ್ಕ ಸಂದರ್ಭದಲ್ಲಿ ಪರಿಹಾರ ಸಿಗುವುದಿಲ್ಲ ಎಂದರು.

300x250 AD

ಜೀವಜಲ ಕಾರ್ಯಪಡೆಯ ಅಧ್ಯಕ್ಷ ಹಾಗು ಜೆಸಿಬಿ ಮತ್ತು ಹಿಟಾಚಿ ಚಾಲಕ-ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಹಿಟಾಚಿ ಮತ್ತು ಜೆಸಿಬಿ ಚಾಲಕ ಮಾಲಕರು ಒಂದು ಸಂಘವನ್ನು ಕಟ್ಟಿ ತಮ್ಮ ವೃತ್ತಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯವಾಗಿದೆ. ಆದರೆ ಮುಂದೆ ಪರಿಸ್ಥಿತಿ ಕಠಿಣವಿದೆ. ಸಂಘ ಮಾಡಿ ಒಗ್ಗಟ್ಟು ಮೆರೆದರೆ ಮಾತ್ರ ಸಂಘದ ಮತ್ತು ಚಾಲಕ ಮಾಲಕರ ಅಸ್ತಿತ್ವ ಉಳಿಸಿಕೊಂಡು ಹೋಗಲು ಸಾಧ್ಯ. ಒಂದು ಜೆಸಿಬಿಗೆ ಸುಮಾರು 30 ರಿಂದ 35 ಲಕ್ಷವಿದೆ. ದಿನಕ್ಕೆ ಬಡ್ಡಿ ಮತ್ತು ವಿಮೆ ಸೇರಿ ಸುಮಾರು 1550 ರೂ ಆಗಬಹುದು. ಈ ಬಡ್ಡಿ ಮತ್ತು ವಿಮೆ ಕೆಲಸ ಇದ್ರು, ಇಲ್ಲದಿದ್ರು ಕಟ್ಟಲೇಬೇಕು. ಇಂತಹ ಪರಿಸ್ಥಿತಿಯಲ್ಲಿ ಚಾಲಕ ಮಾಲಕರು ವಾಹನಗಳನ್ನು ನಡೆಸುತ್ತಿದ್ದಾರೆ. ಈ ವಾಹನದಿಂದಲೇ ನಾನು ಜೀವನ ನಡೆಸುತ್ತೇನೆಂದರೆ ಅದು ಅವನಿಗೆ ಸಾಧ್ಯವಾಗದ ಮಾತು. ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ದರದಲ್ಲಿ ವ್ಯತ್ಯಾಸವಾಗುವುದರಿಂದ ಜೆಸಿಬಿ ದಂದೆ ಸ್ವಲ್ಪ ಮಟ್ಟಿಗೆ ದುಬಾರಿಯಾಗಬಹುದು. ಆದರೆ ಸಂಘದ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ನಿಯಂತ್ರಿಸಬಹದು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಉದ್ಯಮಿ ಅಶ್ವಿನ್ ಭೀಮಣ್ಣ, ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಕೆ. ಭಾಗ್ವತ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಜೆಸಿಬಿ ಚಾಲಕ-ಮಾಲಕರು‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top