Slide
Slide
Slide
previous arrow
next arrow

ಮುರುಡೇಶ್ವರ ತಲುಪಿದ ಅನಂತಮೂರ್ತಿ ಹೆಗಡೆ ಸ್ವಾಭಿಮಾನಿ ಪಾದಯಾತ್ರೆ

300x250 AD

ದಾರಿಯುದ್ದಕ್ಕೂ ಅಪಾರ ಜನಬೆಂಬಲ | ಭಟ್ಕಳದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ

ಹೊನ್ನಾವರ: ಮುಂಬರುವ ಬಜೆಟ್ ಅಧಿವೇಶನದಲ್ಲಿ ಆಸ್ಪತ್ರೆಗೆ ಹಣ ಬಿಡುಗಡೆ ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ ಕೈಗಾರಿಕೆಗಳನ್ನು‌ ಸ್ಥಾಪಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕುಮಟಾದಿಂದ ಭಟ್ಕಳದವರೆಗೆ ನಡೆಯುತ್ತಿರುವ ಪಾದಯಾತ್ರೆ ಮಂಗಳವಾರ ಹೊನ್ನಾವರದಿಂದ ಆರಂಭವಾಗಿ ಸಂಜೆ ಮುರುಡೇಶ್ವರ ತಲುಪಿದ್ದು ದಾರಿಯುದ್ದಕ್ಕೂ ಅಪಾರ ಜನ ಬೆಂಬಲ ವ್ಯಕ್ತವಾಗಿದೆ. ಇಂದು ಭಟ್ಕಳ ತಲುಪಲಿದ್ದು, ಉಸ್ತುವಾರಿ ಸಚಿವ ಮಾಂಕಾಳ ವೈದ್ಯರ ಕಛೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ.

ಸೋಮವಾರ ಕುಮಟಾ ಮಹಾಸತಿ ದೇವಾಲಯದಿಂದ ಆರಂಭವಾದ ಪಾದಯಾತ್ರೆ ಹೊನ್ನಾವರ ತಲುಪಿ ಮಂಗಳವಾರ ಬೆಳಿಗ್ಗೆ ಪಾದಯಾತ್ರೆಗೆ ಸ್ಥಳೀಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಸಂಕೋಳ್ಳಿ, ಸಂದೀಪ್ ಪೂಜಾರಿ, ಸತ್ಯನಾರಾಯಣ ಶೇಟ್, ಅಶೋಕ ಜಾದೂಗಾರ, ಕಾಸರಕೋಡನ ಲೋಕೇಶ ಪಾಲೇಕರ್, ಗಜಾನನ ಕಾಸರಕೋಡ, ಗೋಪಾಲ‌ ಕಾಸರಕೋಡ, ಪ್ರವೀಣ ಕಾಸರಕೋಡ, ನಾಗರಾಜ ಕಾಸರಕೋಡ, ರಾಜೇಶ ಕಾಸರಕೋಡ ಪಾದಯಾತ್ರೆಯನ್ನು ಕಾಸರಕೋಡನಲ್ಲಿ ಸ್ವಾಗತಿಸಿ ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಭಾಗಿಯಾದರು. ಮಾರ್ಗಮಧ್ಯ ಮಧ್ಯಪ್ರದೇಶದ ಉಜ್ಜಯಿನಿಯಿಂದ ಬಂದ ನಾಗಾಸಾಧುಗಳು ಪಾದಯಾತ್ರೆ ರೂವಾರಿ ಅನಂತಮೂರ್ತಿಗೆ ರುದ್ರಾಕ್ಷಿಯನ್ನು ನೀಡಿ, ಆಸ್ಪತ್ರೆ ನಿರ್ಮಾಣ ಆಗುವುದು ನಿಶ್ಚಿತ ಎಂದು ಆಶೀರ್ವದಿಸಿದರು.

300x250 AD

ಗುಣವಂತೆಯಲ್ಲಿ ಪಾದಯಾತ್ರೆಯನ್ನು ಸ್ಥಳೀಯರಾದ ಮಾಧವ ಪಂಡಿತ್, ಗೋವಿಂದ ಗೌಡ, ಎಂ.‌ಆರ್.‌ಹೆಗಡೆ, ರಾಮು ಪಿ. ನಾಯ್ಕ, ಶಿವಾನಂದ ಗೌಡ ಅವರು ಅದ್ದೂರಿ ಸ್ವಾಗತ ಕೋರಿ, ಜಿಲ್ಲೆಯ ಜನರಿಗಾಗಿ ತಾವು ಮಾಡುತ್ತಿರುವ ಪಾದಯಾತ್ರೆ ಪ್ರಶಂಸನೀಯ. ನಿಮ್ಮ ಈ ಪಾದಯಾತ್ರೆಗೆ ನಮ್ಮ ಬೆಂಬಲವಿದೆ ಹಾಗೂ ನಿಮ್ಮ ಉದ್ದೇಶಗಳು ಈಡೇರಲಿ ಎನ್ನುವ ಮಾತುಗಳನ್ನು ವ್ಯಕ್ತಪಡಿಸಿದರು. ಅವರೂ ಸಹ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಪಾದಯಾತ್ರೆಯಲ್ಲಿ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಂತೋಷ ನಾಯ್ಕ‌ ಬ್ಯಾಗದ್ದೆ, ಅಹೀಶ ಹೆಗಡೆ ಸೇರಿದಂತೆ ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಇಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ಮನವಿ ಸಲ್ಲಿಕೆ
ಮಂಗಳವಾರ ಮುರುಡೇಶ್ವರ ತಲುಪಿದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆ ಬುಧವಾರ ಮಧ್ಯಾಹ್ನ ಭಟ್ಕಳ ತಲುಪಲಿದ್ದು, ನಗರದಾದ್ಯಂತ ಪ್ರತಿಭಟನಾ ಮೆರವಣಿಗೆ ಮಾಡಿ, ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಕಛೇರಿಗೆ ತೆರಳಿ ಉಸ್ತುವಾರಿ ಸಚಿವ ಮಂಕಾಳ‌ ವೈದ್ಯರಿಗೆ ಮನವಿ ಸಲ್ಲಿಸಲಿದ್ದಾರೆ.

Share This
300x250 AD
300x250 AD
300x250 AD
Back to top