Slide
Slide
Slide
previous arrow
next arrow

ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ: ಕ್ರಮಕ್ಕೆ ಆಗ್ರಹ

300x250 AD

ಸಿದ್ದಾಪುರ: ಸಾರಿಗೆ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ವೈಟ್ ಬೋರ್ಡ್ ವಾಹನದಲ್ಲಿ ಶಾಲಾ ಮಕ್ಕಳನ್ನು ಹಾಗೂ ಪ್ರಯಾಣಿಕರನ್ನು ಕಾನೂನು ಬಾಹಿರವಾಗಿ ಬಾಡಿಗೆ ಹೋಗುತ್ತಿರುವ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಹಳದಿ ಬೋರ್ಡ್ ವಾಹನ ನಿಲುಗಡೆಗೆ ಪಟ್ಟಣದ ಬಸ್ ನಿಲ್ದಾಣದ ಸಮೀಪ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಪಟ್ಟಣದ ಬೀರಗುಂಡಿ ಭೂತೇಶ್ವರ ಪ್ರವಾಸಿ ವಾಹನ ಚಾಲಕ-ಮಾಲಕ ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಹೊಸೂರು ಆಗ್ರಹಿಸಿದ್ದಾರೆ.

ಸ್ಥಳೀಯ ಶೃಂಗೇರಿ ಶಂಕರಮಠದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ವೈಟ್ ಬೋರ್ಡ್ ವಾಹನದವರು ಕಾನೂನು ಬಾಹಿರವಾಗಿ ಬಾಡಿಗೆ ಹೋಗುತ್ತಿರುವ ಕುರಿತು ಇದರಿಂದ ಹಳದಿ ಬೋರ್ಡ್ ವಾಹನ ಹೊಂದಿರುವ ನಮಗೆ ಜೀವನ ನಡೆಸುವುದು ಕಷ್ಟವಾಗಿದೆ. ಈ ಕುರಿತು ಈಗಾಗಲೇ ಆರ್‌ಟಿಒ, ತಹಸೀಲ್ದಾರ, ಪೊಲೀಸ್ ಇಲಾಖೆಯವರಿಗೆ ಮನವಿ ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಆರ್‌ಟಿಒ ಅವರನ್ನು ಕೇಳಿದರೆ ಪೊಲೀಸರನ್ನು , ಪೊಲೀಸರ್‌ನ್ನು ಕೇಳಿದರೆ ಆರ್‌ಟಿಒ ಅವರನ್ನು ತೋರಿಸುತ್ತಾರೆ. ವೈಟ್ ಬೋರ್ಡ್ ವಾಹನ ಹೊಂದಿದವರು ಶಾಲಾ ಮಕ್ಕಳನ್ನು ಶಾಲೆಗೆ ಬಿಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಆದರೂ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾನೂನು ಬಾಹಿರವಾಗಿರುವ ವಾಹನದವರ ಮೇಲೆ ಕ್ರಮಕೈಗೊಳ್ಳಬೇಕು. ಅಲ್ಲದೇ ಹಳದಿ ಬೋರ್ಡ್ ವಾಹನದವರಿಗೆ ಪಟ್ಟಣದಲ್ಲಿ ಸರಿಯಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಈ ಕುರಿತು ಪಪಂ ಅಧಿಕಾರಿಗಳಿಗೆ,ತಹಸೀಲ್ದಾರ, ಪೊಲೀಸ್ ಇವರಿಗೆ ಮನವಿ ನೀಡಿ ಸಾಕಾಗಿ ಹೋಗಿದೆ. ಈ ಕುರಿತು ಈ ಹಿಂದಿನ ಶಾಸಕರಿಗೆ ಹಾಗೂ ಇಂದಿನ ಶಾಸಕರಿಗೂ ಮನವಿ ಸಲ್ಲಿಸಿದ್ದು ಪ್ರಯೋಜನವಾಗಿಲ್ಲ. ಅದ್ದರಿಂದ ನಮ್ಮ ಈ ಎರಡೂ ಸಮಸ್ಯೆಗಳನ್ನು ಹತ್ತು ದಿನದೊಳಗೆ ಬಗೆ ಹರಿಸದಿದ್ದರೆ ಫೆ.22ರಂದು ಸಿದ್ದಾಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಹೇಳಿದರು.

300x250 AD

ಸಂಘದ ಪದಾಧಿಕಾರಿಗಳಾದ ದಿನಕರ ನಾಯ್ಕ ಬೇಡ್ಕಣಿ, ಮಾರುತಿ ಮಡಿವಾಳ ಬಿಕ್ಕಳಸೆ, ಯೋಗೇಶ ನಾಯ್ಕ ಹೊಸೂರು, ಇರ್ಪಾನ್, ವಸಂತ ಮಡಿವಾಳ ಹೊಸೂರು, ರಮಾನಂದ ಬಿಳಗಿ, ಯೋಗೇಶ ಶಾನಭಾಗ, ರಾಜೇಂದ್ರ ಇಟಗಿ, ವಿಶ್ವಾಸ, ನಯಾಜ, ಅನಂತ ಕುರವಂತೆ ಇತರರಿದ್ದರು.

Share This
300x250 AD
300x250 AD
300x250 AD
Back to top