Slide
Slide
Slide
previous arrow
next arrow

ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅನಿವಾರ್ಯತೆಯಿದೆ : ಮಂಜುನಾಥ ಭಾರತಿ ಸ್ವಾಮೀಜಿ

300x250 AD

ದಾಂಡೇಲಿ: ಇಂದು ಆಧುನಿಕತೆಯ ಪದ್ಧತಿಗೆ ಶರಣಾಗಿ ಗುರುಕುಲ ಶಿಕ್ಷಣವೇ ಮಾಯವಾಗಿದೆ ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನೈತಿಕತೆ, ಆತ್ಮವಿಶ್ವಾಸ, ಶಿಸ್ತು, ಬುದ್ಧಿಶಕ್ತಿ ಮೊದಲಾದ ಗುಣಗಳ ಕಲ್ಪನೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣದ ಅನಿವಾರ್ಯತೆಯಿದೆ ಎಂದು ಬೆಂಗಳೂರಿನ ಗವಿಪುರಂ ಗೋಸಾಯಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ವೇದಾಂತಚಾರ್ಯ ಪೂಜ್ಯ ಶ್ರೀಮಂಜುನಾಥ ಭಾರತಿ ಸ್ವಾಮಿಗಳವರು ನುಡಿದರು.

ಅವರು ನಗರದ ಮರಾಠಾ ಸಮಾಜ ಭವನದಲ್ಲಿ ಮಂಗಳವಾರ ಸಮಾಜ ಬಾಂಧವರ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಉನ್ನತ ಸಂಸ್ಕಾರ, ಸಂಸ್ಕೃತ, ಆಧ್ಯಾತ್ಮ, ಭಗವದ್ಗೀತೆ, ಉಪನಿಷತ್, ಶಾಸ್ತ್ರೀಯ ಸಂಗೀತ, ಮೃದಂಗ, ಪ್ರವಚನ, ಕೀರ್ತನೆ, ಯೋಗ, ಸಂಪ್ರದಾಯ, ಆಚಾರ -ವಿಚಾರ, ವೈದಿಕ ಜ್ಞಾನ, ಊಟ ವಸತಿಯೊಂದಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಶ್ರೀ ಹರಿ ಗೋಸಾಯಿ ಮಠದ ಆಶ್ರಯದಡಿ ನಿರ್ಮಾಣವಾಗಲಿರುವ ಶ್ರೀ.ಹರಿ ಛತ್ರಪತಿ ಶಿವಾಜಿ ಮಹಾರಾಜರ ಗುರುಕುಲದ ಭೂಮಿ ಪೂಜನ ಕಾರ್ಯಕ್ರಮವನ್ನು ಫೆಬ್ರವರಿ 11ರಂದು ಬೆಳಿಗ್ಗೆ 10 ಗಂಟೆಗೆ ಹಳಿಯಾಳ ತಾಲೂಕಿನ ಹವಗಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜನ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸು ಗಳಿಸಬೇಕೆಂದು ಕರೆ ನೀಡಿದರು.

300x250 AD

ಈ ಸಂದರ್ಭದಲ್ಲಿ ಮರಾಠಾ ಸಮಾಜದ ಅಧ್ಯಕ್ಷರಾದ ಡಾ.ಮೋಹನ‌ ಪಾಟೀಲ್, ಸಮಾಜದ ಪ್ರಮುಖರಾದ ಎನ್. ವಿ. ಪಾಟೀಲ್, ಸುನೀಲ್ ಸೋಮನಾಚೆ, ಸಂಜೀವ್ ಜಾಧವ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top