Slide
Slide
Slide
previous arrow
next arrow

ಕಾರವಾರ ಮೀಡಿಯಾ ಕಪ್ 2024: ‘ಕಾರವಾರ ವಾರಿಯರ್ಸ್’ ಚಾಂಪಿಯನ್

300x250 AD

ಕಾರವಾರ: ಕಾರವಾರ ಮೀಡಿಯಾ ಕಪ್-2024 ಪ್ರಶಸ್ತಿಯನ್ನು ಕಾರವಾರ ವಾರಿಯರ್ಸ್‌ (ವಿಜುವಲ್ ಮೀಡಿಯಾ) ತಂಡ ಗೆದ್ದುಕೊಂಡಿತು‌.

ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ 2 ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಪತ್ರಕರ್ತರು, ಐಕಾನ್ ಪ್ಲೇಯರ್ ಗಳನ್ನು ಒಳಗೊಂಡ 10 ತಂಡಗಳು ಪಾಲ್ಗೊಂಡಿದ್ದವು.

ಕಾರವಾರ ಕಿಂಗ್ಸ್ (ಮುದ್ರಣ ಮಾಧ್ಯಮ) ಹಾಗೂ ಕಾರವಾರ ವಾರಿಯರ್ಸ್ ತಂಡಗಳ ನಡುವೆ ಅಂತಿಮ ಪಂದ್ಯ ನಡೆಯಿತು. ಟಾಸ್ ಗೆದ್ದು ಬ್ಯಾಟ್ ಮಾಡಿದ ಕಾರವಾರ ವಾರಿಯರ್ಸ್‌ ತಂಡದ ಸದಸ್ಯರು 121 ರನ್ ಕಲೆಹಾಕಿದರು. ಈ ಮೊತ್ತವನ್ನು ಬೆನ್ನು ಹತ್ತಿದ ಕಾರವಾರ ಕಿಂಗ್ಸ ತಂಡಕ್ಕೆ 98 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.

ಸಮಾರೋಪ ಸಮಾರಂಭ: ಕ್ರೀಡೆ ಎನ್ನುವುದು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಲ್ಲ ಎಂದು ಸೇಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಹೇಳಿದರು.

300x250 AD

ಕಾರವಾರ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಮೀಡಿಯಾ ಕಪ್- 2024 ನಲ್ಲಿ ವಿಜೇತ ತಂಡಕ್ಕೆ 30 ಸಾವಿರ ರೂ‌. ಬಹುಮಾನ ಹಾಗೂ ಟ್ರೋಫಿ ವಿತರಿಸಿ ಅವರು ಮಾತನಾಡಿದರು. ಮಾಧ್ಯಮ ಸಂವಿಧಾನದ ನಾಲ್ಕನೆಯ ಅಂಗ. ಅದು ಸರಿಯಾಗಿದ್ದರೆ ಸಮಾಜ ಸುಧಾರಣೆ ಸಾಧ್ಯ ಎಂದರು. ಮಾಧ್ಯಮ ಉತ್ತಮ ದಾರಿಯಲ್ಲಿ ಇದ್ದರೆ, ಉಳಿದ ಮೂರು ಅಂಗ ಸರಿಯಿರುತ್ತವೆ ಎಂದರು.

ಅತಿಥಿಯಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಗೆ ಉತ್ತಮ ಕ್ರೀಡಾಂಗಣವಾಗಲಿ ಎಂದು ಆಶಿಸಿದರು.
ಮತ್ತೋರ್ವ ಅತಿಥಿ ಕ್ರೀಡಾಪಟು ಗಿರೀಶ ನಾಯ್ಕ ಮಾತನಾಡಿದರು. ರತ್ನಾಕರ ನಾಯ್ಕ, ಪತ್ರಿಕಾ ಭವನ ನಿರ್ವಹಣೆ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ, ಪದಾಧಿಕಾರಿಗಳಾದ ಸುಭಾಷ್ ಚಂದ್ರ ಎನ್.ಎಸ್., ಗಣೇಶ್ ಹೆಗಡೆ, ಹಿರಿಯ ಪತ್ರಕರ್ತರಾದ ನಾಗರಾಜ್ ಹರಪನಹಳ್ಳಿ, ವಸಂತ ಭಟ್ಟ ಕತಗಾಲ ವೇದಿಕೆಯಲ್ಲಿದ್ದರು‌ . ಸಂದೀಪ್ ಸಾಗರ, ಗಿರೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top