Slide
Slide
Slide
previous arrow
next arrow

ಬೂತ್ ಲೆವೆಲ್ ಏಜೆಂಟರ್ ನೇಮಕಾತಿ;ಕೆನರಾ ಕ್ಷೇತ್ರಕ್ಕೆ ಸಂಯೋಜಕರಾಗಿ ರವೀಂದ್ರ ನಾಯ್ಕ

300x250 AD

ಶಿರಸಿ: ಮುಂಬರುವ ಲೋಕಸಭಾ ಚುನಾವಣೆಗೆ, ಬೂತ್ ಲೆವೆಲ್ ಏಜೆಂಟರಾಗಿ ನೇಮಕಾತಿ ಪ್ರಕ್ರಿಯೆಗೆ, ಕೆನರಾ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ನಾಯ್ಕ ಅವರನ್ನು ಸಂಯೋಜಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯು ನೇಮಕ ಮಾಡಿದೆ.

 ಕೆನರಾ ಲೋಕಸಭಾ ಕ್ಷೇತ್ರಕ್ಕೆ ಬರುವ ಏಂಟು ವಿಧಾನಸಭಾ ಕ್ಷೇತ್ರದ ಬೂತ್ ಲೆವೆಲ್ ಏಜೆಂಟರ್ ನೇಮಕಾತಿ ಪ್ರಕ್ರಿಯೆಯನ್ನು ನಿರ್ದಿಷ್ಟ ಸಮಯದೊಳಗೆ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸುವ ಮತ್ತು ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೇಸ್‌ದೊಂದಿಗೆ ಸಮನ್ವಯತೆ ಸಾಧಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯು ರವೀಂದ್ರ ನಾಯ್ಕ ಅವರನ್ನು ಲೋಕಸಭೆ ಕ್ಷೇತ್ರಕ್ಕೆ ಸಂಯೋಜಕರಾಗಿ ನೇಮಿಸಲಾಗಿದೆ.

300x250 AD

 ರವೀಂದ್ರ ನಾಯ್ಕ ಕಾಂಗ್ರೇಸ್ ಪಕ್ಷದಲ್ಲಿ ಜಿಲ್ಲಾ ವಿದ್ಯಾರ್ಥಿ ಕಾಂಗ್ರೇಸ್ ಘಟಕ(1990), ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ(1993), ಜಿಲ್ಲಾ ಕಾಂಗ್ರೇಸ್ ಹಿಂದುಳಿದ ಘಟಕ(1998), ಜಿಲ್ಲಾ ಕಾಂಗ್ರೇಸ್ ಕಾನೂನು ಘಟಕದ ಅಧ್ಯಕ್ಷ(2008), ರಾಜ್ಯ ಕಾಂಗ್ರೇಸ್ ಕಾನೂನು ಮತ್ತು ಮಾನವ ಹಕ್ಕು ಘಟಕದ ಹಿರಿಯ ಉಪಾಧ್ಯಕ್ಷರಾಗಿ(2009) ಕಾರ್ಯ ನಿರ್ವಹಿಸಿದ್ದು, ಹಾಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top