Slide
Slide
Slide
previous arrow
next arrow

ತಾಳಮದ್ದಲೆ ಮಹಿಳಾ ಕಲಾವಿದೆಯರಿಗೆ ಸನ್ಮಾನ

300x250 AD

ಶಿರಸಿ:  ಬೆಂಗಳೂರಿನ  ಕ.ವಿ.ಪ್ರ.ನಿ.ನಿ., ಲೆಕ್ಕಾಧಿಕಾರಿಗಳ ಸಂಘದಲ್ಲಿ,  ಯಕ್ಷಗಾನ ತಾಳಮದ್ದಲೆ ಕ್ಷೇತ್ರದಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಹೊಸ ತಲೆಮಾರನ್ನೇ ಸೃಷ್ಟಿಸುತ್ತಿರುವ ಶಿರಸಿಯ ಮಹಿಳಾ ಕಲಾವಿದೆಯರಿಗೆ ಸನ್ಮಾನ ಹಾಗೂ ಕಲಾವಿದೆಯರಿಂದ  ಸೀತಾಪರಿತ್ಯಾಗ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ,ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ,  ಇತ್ತೀಚೆಗೆ ಕೆಂಪಣ್ಣ ಕವಿ ಎಂಬುವನ ಯಕ್ಷಗಾನ ಪ್ರಸಂಗ ಸಾಹಿತ್ಯ ಕುರಿತು ಸಂಶೋಧನೆ ಪುಸ್ತಕ ರಚಿಸಿದ್ದನ್ನು ಪ್ರಸ್ತಾಪಿಸಿ, , ಕಾವ್ಯವು ಹೇಗೆ ದೃಶ್ಯ ಮತ್ತು ಶ್ರವ್ಯ ಕಾವ್ಯವಾಗಿ ಆಯಾಮ ಪಡೆದುಕೊಂಡಿದೆ, ಹಾಗೂ ಅದಕ್ಕೆ ಯಕ್ಷಗಾನದ ಕೊಡುಗೆಯೇನು?; ಯಕ್ಷಗಾನ- ತಾಳಮದ್ದಲೆ ಹೇಗೆ ಜನಮಾನಸವನ್ನು ವ್ಯಾಪಿಸಿದೆ ಎಂಬುದನ್ನು ವಿವರಿಸಿ, ಯಕ್ಷಗಾನ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಲಾಂಛನವಾಗುವ ಅಗತ್ಯವಿದೆಯೆಂದು  ಹೇಳಿದರು. 

 ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ದಿವಾಕರ ಹೆಗಡೆ ಕೆರೆಹೊಂಡ ಯಕ್ಷಗಾನ- ತಾಳಮದ್ದಳೆ ನಡೆದು ಬಂದ ದಾರಿಯ ಕುರಿತು ಪ್ರಸ್ತಾಪಿಸಿ, ಸನ್ಮಾನಿತ ಕಲಾವಿದೆಯರ ಸಾಧನೆ ಪಟ್ಟಿ ಮಾಡಿ ಅಭಿನಂದನಾ ನುಡಿ ಸಲ್ಲಿಸಿದರು. 

ಇದೇ ಸಂದರ್ಭದಲ್ಲಿ ಕಲಾವಿದೆಯರಾದ ನಿರ್ಮಲಾ ಹೆಗಡೆ ಗೋಳಿಕೊಪ್ಪ , ಸುಮಾ ಹೆಗಡೆ ಗಡಿಗೆಹೊಳೆ, ಡಾ.ವಿಜಯನಳಿನಿ ರಮೇಶ, ಭವಾನಿ ಭಟ್ ಅವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತ ರ ಪರವಾಗಿ ಡಾ.ವಿಜಯನಳಿನಿ ರಮೇಶ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಮಟ್ಟು ಕುರಿತು ತಿಳಿಸಿ, ಅಭಿನಂದಿಸಿದ್ದಕ್ಕೆ ಕೃತಜ್ಞತೆ ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ  ಸಾಹಿತಿ ಶ್ರೀಮತಿ ರಜನಿ ಬಾಲಸುಬ್ರಹ್ಮಣ್ಯ ಸಾಹಿತ್ಯ, ಕಲೆ ಕುರಿತು ಮಾತನಾಡಿ ಇಂತಹ ಕಾರ್ಯಕ್ರಮಗಳು ಕಲಾವಿದರಿಗೆ ಪ್ರೇರಣಾದಾಯಕ ಎಂದು ನುಡಿದರು. 

300x250 AD

ನಂತರ ಸೀತಾಪರಿತ್ಯಾಗ ತಾಳಮದ್ದಲೆ ಕಾರ್ಯಕ್ರಮ ಜನಮನ ಸೂರೆಗೊಂಡಿತು.  ಹಿಮ್ಮೇಳದಲ್ಲಿ ಕುಮಾರಿ ಚಿತ್ಕಲಾ ಕೆ ತುಂಗಾ ಅವರ ಮಧುರ ಕಂಠ, ಕುಮಾರ್ ಚಿನ್ಮಯ ಹೆಗಡೆ  ಅಂಬಾರಗೋಡ್ಲು ಅವರ ಸಮರ್ಥ ಮದ್ದಳೆ ವಾದನ ಮೆರಗು ನೀಡಿತು.ಮುಮ್ಮೇಳದಲ್ಲಿ 

ಡಾ. ವಿಜಯನಳಿನಿ ರಮೇಶ ಸೇವಕನ ಪಾತ್ರವನ್ನೂ, ನಿರ್ಮಲಾ ಹೆಗಡೆ, ಗೋಳಿಕೊಪ್ಪ ಸೀತೆಯ ಪಾತ್ರದಲ್ಲೂ, ಸುಮಾ ಹೆಗಡೆ, ಗಡಿಗೆಹೊಳೆ ಶ್ರೀರಾಮ ನಾಗಿ ಹಾಗೂ ಭವಾನಿ ಭಟ್ಟ ಶಿರಸಿ ಲಕ್ಷ್ಮಣನ ಪಾತ್ರವನ್ನೂ  ನಿರ್ವಹಿಸಿ ,ತಮ್ಮ ಅರ್ಥಗಾರಿಕೆಯಲ್ಲಿ ಪ್ರೌಢಿಮೆ ಮೆರೆದರು. 

ಈ ಸಂದರ್ಭದಲ್ಲಿ ನಿವೃತ್ತ ಆರ್ಥಿಕ ಸಲಹೆಗಾರ, ಲೆಕ್ಕಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ಕೆ.ರಾಮಚಂದ್ರ ರೆಡ್ಡಿ,ಪೂರ್ಣಿಮಾ ಗೋಪಾಲ, ಭವ್ಯಾ  ಎ.,‌ಗೀತಾ ಸಭಾಹಿತ, ವಾಸುದೇವ ಕಾರಂತ ಮುಂತಾದ ಗಣ್ಯರು ಉಪಸ್ಥಿತರಿದ್ದರು. 

Share This
300x250 AD
300x250 AD
300x250 AD
Back to top