ಶಿರಸಿ: ತಾಲೂಕಿನ ನರೆಬೈಲಿನಲ್ಲಿರುವ ಶ್ರೀ ಸೋಮೇಶ್ವರ ದೇವಸ್ಥಾನದ ಶಿವಲಿಂಗ ಮೂರ್ತಿಗೆ ಕಿಡಿಗೇಡಿಗಳು ಅಶುದ್ಧತೆ ಮಾಡಿರುವ ಘಟನೆ ನಡೆದಿದೆ.
ದೇವಾಲಯದಲ್ಲಿರುವ ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರದಿಂದ ಬರೆದು ಅಶುದ್ಧತೆ ಮಾಡಿದ್ದಾರೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಪುರೋಹಿತರಿಂದ ಈ ಘಟನೆ ಬೆಳಕಿಗೆ ಬಂದಿದೆ. ಗರ್ಭಗುಡಿಯ ಬಾಗಿಲು ದೂಡಿ ಚಾಕ್ ಪೀಸ್ ನಿಂದ ಬರೆದು ಅಶುದ್ದತೆ ಮಾಡಿದ್ದಾರೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೋಲಿಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯನ್ನು ಖಂಡಿಸಿ ದೇವಸ್ಥಾನದ ಮುಂದೆ ಗ್ರಾಮಸ್ಥರು ಜಮಾಯಿಸಿದ್ದಾರೆ.