Slide
Slide
Slide
previous arrow
next arrow

ಹುಟ್ಟೂರಲ್ಲಿ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಶಾಂತಣ್ಣ ವಿಲೀನ

300x250 AD

ಸಹಕಾರಿ ರತ್ನ ಇನ್ನು ನೆನಪು ಮಾತ್ರ

ಶಿರಸಿ: ಅಜಾತಶತ್ರುವಾಗಿದ್ದ ದಿ. ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರ ಅಂತ್ಯಕ್ರಿಯೆ ಗುರುವಾರ ನಡೆಯಿತು. ಸರಳ, ಸಜ್ಜನಿಕೆಗೆಗೆ ಹೆಸರಾಗಿದ್ದ ಅವರು ಪಂಚಭೂತಗಳಲ್ಲಿ ವಿಲೀನರಾದರು.

ಸಹಕಾರ, ರಾಜಕೀಯ, ಧಾರ್ಮಿಕ, ಶಿಕ್ಷಣ ಹೀಗೆ ಎಲ್ಲಾ ರಂಗದಲ್ಲೂ ಹೆಸರು ಮಾಡಿದ್ದ ಶಾಂತಾರಾಮ ಹೆಗಡೆಯವರು ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಗುರುವಾರ ಬೆಳಿಗ್ಗೆ ಅವರ ಹುಟ್ಟೂರಾದ ಶೀಗೇಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪುತ್ರ ಶಶಾಂಕ ಹೆಗಡೆ ಶೀಗೇಹಳ್ಳಿ ಎಲ್ಲಾ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನಡೆಸಿದರು.

ಪ್ರೀತಿಯ ಶಾಂತಣ್ಣ ತೀರಿದ್ದಾರೆ ಎಂಬ ಸುದ್ದಿಯ ನಂತರ ಸಾಕಷ್ಟು ಹಿರಿ, ಕಿರಿಯ ಬಂಧುಗಳು, ಅಭಿಮಾನಿಗಳು ಅವರ ಪಾರ್ಥೀವ ಶರೀರವನ್ನು ನೋಡಲು ಸಾಮ್ರಾಟ್ ಅತಿಥಿ ಗೃಹಕ್ಕೆ ಆಗಮಿಸಿದ್ದರು. ಬುಧವಾರ ರಾತ್ರಿಯವರೆಗೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಗುರುವಾರ ಅವರ ಸ್ವಗೃಹ ಶಿಗೇಹಳ್ಳಿಯಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮಂದಿ ಶಾಂತಣ್ಣನ ಅಂತಿಮ ದರ್ಶನ ಪಡೆದು, ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.

300x250 AD

ಗಣ್ಯರ ಸಂತಾಪ :
ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಬುಧವಾರ ಬೆಂಗಳೂರಿಗೆ ತೆರಳಿದ್ದ ಕಾರಣ ಗುರವಾರ ಬೆಳಿಗ್ಗೆ ರೇಲ್ವೆಯ ಮೂಲಕ ತಾಳಗುಪ್ಪ ಆಗಮಿಸಿ, ಅಲ್ಲಿಂದ ನೇರವಾಗಿ ಶಾಂತಾರಾಮ ಹೆಗಡೆಯವರ ದರ್ಶನಕ್ಕೆ ತೆರಳಿದರು. ಮಾಲೆಯನ್ನು ಅರ್ಪಿಸಿ ತಮ್ಮ ಬಹುಕಾಲದ ಒಡನಾಡಿಯ ಆತ್ಮಕ್ಕೆ ಶಾಂತಿ ಕೋರಿದರು. ಭೀಮಣ್ಣ ನಾಯ್ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುವ ಮೊದಲು ಶಾಂತಾರಾಮ ಹೆಗಡೆಯವರು ದಶಕಗಳ ಕಾಲ ಕಾಂಗ್ರೆಸ್ಸನ್ನು ಜಿಲ್ಲೆಯಲ್ಲಿ ಮುನ್ನಡೆಸಿದ್ದರು. ನಂತರವೂ ಸಹ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸಹಕಾರ ನೀಡಿದ್ದನ್ನು ಹಾಗೂ ಪಕ್ಷಕ್ಕೆ, ಸಹಕಾರ ಕ್ಷೇತ್ರಕ್ಕೆ, ಶಿಕ್ಷಣ, ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.

ಅದೇ ರೀತಿ ಗದಗದಿಂದ ಮಾಜಿ ಶಾಸಕ ಹಾಗೂ ಎಚ್.ಕೆ.ಪಾಟೀಲ್ ಸಹೋದರ ಡಿ.ಆರ್.ಪಾಟೀಲ್ ಸಹ ಶಾಂತಾರಾಮ ಹೆಗಡೆಯವರ ಪಾರ್ಥೀವ ಶರೀರಕ್ಕೆ ತಮ್ಮ ಅಂತಿಮ ನಮನ ಸಲ್ಲಿಸಿದರು. ಈ ಹಿಂದೆ ಗದಗದಲ್ಲಿ ಕೆ.ಎಚ್.ಪಾಟೀಲ್ ಪ್ರತಿಷ್ಠಾನದಿಂದ ನೀಡಲಾಗುವ ಪ್ರಶಸ್ತಿಗೂ ಸಹ ಶಾಂತಣ್ಣ ಭಾಜನರಾಗಿದ್ದರು. ಸಹೋದರ ಎಚ್.ಕೆ.ಪಾಟೀಲ್ ಮತ್ತು ತಮ್ಮ ಜೊತೆಗಿನ ಹೆಗಡೆಯವರ ಬಾಂಧವ್ಯವನ್ನು ಡಿ.ಆರ್.ಪಾಟೀಲ್ ಇದೇ ವೇಳೆ ನೆನೆದು ಭಾವುಕಾದರು.

ಹಿರಿಯ ಸಹಕಾರಿಗಳಾದ ಪ್ರಮೋದ ಹೆಗಡೆ, ಎಲ್.ಟಿ.ಪಾಟೀಲ್, ಶಿವಾನಂದ ಹೆಗಡೆ ಕಡತೋಕ, ಎಸ್.ಕೆ‌. ಭಾಗ್ವತ್ ಮುಂತಾದವರು ಗುರುವಾರ ಶೀಗೇಹಳ್ಳಿಗೆ ಭೇಟಿ ನೀಡಿದರು.

Share This
300x250 AD
300x250 AD
300x250 AD
Back to top