ಯಲ್ಲಾಪುರ: ಮಕ್ಕಳು ಸಾಮಾನ್ಯ ಜ್ಞಾನವನ್ನು ಹೊಂದಬೇಕು. ಈ ದಿಶೆಯಲ್ಲಿ ಶಾಲೆಗಳಲ್ಲಿ ವಿಶೇಷ ಕೌಶಲ್ಯಾತ್ಮಕ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.
ಅವರು ತಾಲೂಕಿನ ಹುತ್ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ, ವಿಜ್ಞಾನ ಮೇಳ, ವಿಜ್ಞಾನ ರಂಗೋಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹ ಸಾತೊಡ್ಡಿ ಹಾಗೂ ನ್ಯಾಯವಾದಿ ನಾಗೇಶ ಭಾಗ್ವತ ಜೇನಮೂಲೆ ಕೊಡುಗೆಯಿಂದ ಶಾಲೆಗೆ ನಿರ್ಮಿಸಿಕೊಟ್ಟ ಪ್ರವೇಶದ್ವಾರವನ್ನು ಎನ್.ಆರ್.ಹೆಗಡೆ ಉದ್ಘಾಟಿಸಿದರು. ಎಲ್.ಎಸ್.ಎಂ.ಪಿ ಸೊಸೈಟಿ ವತಿಯಿಂದ ನೀಡಿದ ನೀರಿನ ಫಿಲ್ಟರ್ ನ್ನು ನಿರ್ದೇಶಕರಾದ ಸುಬ್ರಾಯ ದಾನ್ಯಾನಕೊಪ್ಪ, ಗೋಪಾಲಕೃಷ್ಣ ಭಟ್ಟ ಶಾಲೆಗೆ ಹಸ್ತಾಂತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹ ಸಾತೊಡ್ಡಿ ಮಾತನಾಡಿದರು. ಬಿ.ಆರ್.ಸಿ ಸಂಯೋಜನಾಧಿಕಾರಿ ಎಸ್.ಎಸ್.ಜಗಳೂರು,ಶಿಕ್ಷಣ ಸಂಯೋಜಕ ಜಿ.ಎನ್.ಪ್ರಶಾಂತ್, ಸಿ.ಆರ್.ಪಿ. ಕೆ.ಆರ್.ನಾಯ್ಕ, ಶಿಕ್ಷಕರಾದ ಶಾಲಿನಿ ನಾಯ್ಕ, ವಿಜಯಲಕ್ಷ್ಮಿ ಹೆಗಡೆ, ದೀಪಾ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಸತೀಶ ಶೆಟ್ಟಿ ನಿರ್ವಹಿಸಿದರು. ಮಕ್ಕಳ ವಿಜ್ಞಾನ ಪ್ರಯೋಗ, ವಿಜ್ಞಾನ ರಂಗೋಲಿ, ವ್ಯಾಪಾರ ಮಳಿಗೆ ಗಮನ ಸೆಳೆಯಿತು.