Slide
Slide
Slide
previous arrow
next arrow

ಪ್ರೊ ಕಬಡ್ಡಿ ಪಂದ್ಯಾವಳಿ ಯಶಸ್ವಿ

300x250 AD

ದಾಂಡೇಲಿ : ತಾಲೂಕಿನ ಅಂಬಿಕಾನಗರದ ನಾಗಝರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಧನಗರ ಗೌಳಿ ರಾಜ್ಯ ಮಟ್ಟದ ಪ್ರೊ ಕಬಡ್ಡಿ ಸೀಸನ್ 1 ಪಂದ್ಯಾವಳಿಯು ಯಶಸ್ವಿಯಾಗಿ ಸಂಪನ್ನಗೊಂಡಿತು.

ರಾಜ್ಯದ ಎಂಟು ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಅಂಬಿಕಾನಗರದ ಅಡಿಟ್ ನಂ. 2 ಜೋರೆ ಬುಲ್ಸ್ ತನ್ನದಾಗಿಸಿಕೊಂಡಿತು. ದ್ವಿತೀಯ ಬಹುಮಾನವನ್ನು ದಾಂಡೇಲಿಯ ಕಾಳಿ ಟೈಗರ್ ಪಡೆದುಕೊಂಡಿತು. ಯಳವಳ್ಳಿಯ ಶ್ರೀ ಬಸವೇಶ್ವರ ತಂಡ ಹಾಗೂ ಶ್ರೀ ಜಾನ್ಯ ನವಲಾಯಿ ವಾರಿಯರ್ಸ್ ತಂಡವು ಕ್ರಮವಾಗಿ ತೃತೀಯ ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪಂದ್ಯಾವಳಿಯಲ್ಲಿ ಉತ್ತಮ ದಾಳಿಗಾರರಾಗಿ ಗಂಗಾರಾಮ ಮೀಶಾಳೆ, ಉತ್ತಮ ಹಿಡಿತಗಾರರಾಗಿ ಸಂತೋಷ ತೋರತ್ ಮತ್ತು ಸರಣಿ ಶ್ರೇಷ್ಠ ಆಟಗಾರರಾಗಿ ಸೋನು ಗಾವಡೆ ವೈಯಕ್ತಿಕ ಬಹುಮಾನವನ್ನು ಸ್ವೀಕರಿಸಿದರು.

300x250 AD

ಬುಡಕಟ್ಟು ಸಂಸ್ಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ದನಗರ ಗೌಳಿ ಬುಡಕಟ್ಟು ಸಮುದಾಯವು ಅವಿಸ್ಮರಣೆಯ ಪಂದ್ಯಾವಳಿಯನ್ನು ಆಯೋಜಿಸುವುದರ ಜೊತೆಗೆ ಅತ್ಯುತ್ತಮವಾಗಿ ಸಂಘಟಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.

Share This
300x250 AD
300x250 AD
300x250 AD
Back to top