ಸಿದ್ದಾಪುರ : ಕಾನ್ಮನೆಯಲ್ಲಿ ಶ್ರೀ ಈಶ್ವರ – ನಂದಿ – ನಾಗಮ್ಮ ದೇವರ ಪ್ರತಿಷ್ಠಾಪನೆ ಪ್ರಯುಕ್ತ ರವಿ ನಾಯ್ಕರ ಪ್ರಾಯೋಜಕತ್ವದಲ್ಲಿ ಹೆಗ್ಗರಣಿಯ ಶ್ರೀ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಏರ್ಪಡಿಸಲಾದ ಯಕ್ಷಗಾನ ಆಖ್ಯಾನ “ಶ್ರೀ ನಾಗಚೌಡೇಶ್ವರಿ ಮಹಿಮೆ” ಜನಮೆಚ್ಚಿಗೆ ಗಳಿಸಿತು.
ಮುಮ್ಮೇಳದಲ್ಲಿ ನಾಟ್ಯಾಚಾರ್ಯ ಶಂಕರ ಭಟ್ ಸಿದ್ದಾಪುರ (ಸುಲೋಚನ), ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ (ವಿಡೂರಥ), ಮಂಜುನಾಥ ನಾಯ್ಕ ಕುಮಟಾ (ಸಂಧ್ಯಾವತಿ), ರಘುಪತಿ ನಾಯ್ಕ ಹೆಗ್ಗರಣಿ (ಧರ್ಮದೇವ), ಗಂಗಾಧರ ಹೆಗಡೆ ಕಟ್ಟಿನ ಹಕ್ಕಲು (ಮೊದಲನೇ ವಿಡೂರಥ), ವೆಂಕಟ್ರಮಣ ಹೆಗಡೆ ಮಾದ್ನಕಳ್ (ವಿಷಕಂಠ ಹಾಗೂ ಚಿತ್ರಗುಪ್ತ), ಸದಾನಂದ ಪಟಗಾರ (ಮಾಲತಿ ಹಾಗೂ ಚಿತ್ರಾಂಗಿ), ಕೃಷ್ಣ ವಾನಳ್ಳಿ (ಯಮಧರ್ಮ), ರಾಜು ನಿಡಗೋಡ್ (ಚೌಡೇಶ್ವರಿ), ವಿನಾಯಕ ಮಾವಿನಕಟ್ಟಾ (ಭದ್ರವರ್ಮ), ನಾಗರಾಜ ಹೆಗಡೆ ಉಮ್ಮಚಗಿ (ಪ್ರೇತ), ಲಕ್ಷ್ಮಣ್ ಪಟಗಾರ್ (ಚಿತ್ರರಥ), ಮಂಜು ಪೂಜಾರಿ (ಈಶ್ವರ), ಇವರೆಲ್ಲ ತಮ್ಮ ನೃತ್ಯ – ಹಾವ – ಭಾವ – ಮಾತುಗಾರಿಕೆಯಿಂದ ರಂಜಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಜಿ. ಆರ್. ಹೆಗಡೆ ಮೂರೂರು – ಗಜಾನನ ಭಟ್ ತಳಗೇರಿ – ತಮ್ಮ ಕಂಠಸಿರಿಯಿಂದ ವಿವಿಧ ಮಟ್ಟುಗಳಲ್ಲಿ ಹಾಡಿ ರಂಜಿಸಿದರು. ಮದ್ದಳೆವಾದಕರಾಗಿ ವಿಠಲ ಪೂಜಾರಿ ಮಂಚಿಕೇರಿ – ಚೆಂಡೆವಾದಕರಾಗಿ ಗಂಗಾಧರ ಹೆಗಡೆ ಕಂಚಿಮನೆ ಪೂರಕ ಸಾಥ್ ಒದಗಿಸಿದರು. ಇದೇ ಸಂದರ್ಭದಲ್ಲಿ ಎಂಟು ಸ್ಥಳೀಯ ಕಲಾವಿದರನ್ನು ಸನ್ಮಾನಿಸಲಾಯಿತು.