Slide
Slide
Slide
previous arrow
next arrow

ಸೇವಾದಳ ಶತಮಾನೋತ್ಸವ: ನೈತಿಕ, ದೈಹಿಕ ಶಿಕ್ಷಣ ತರಬೇತಿ ಶಿಬಿರ

300x250 AD

ಶಿರಸಿ: ಶಾಲಾ ಶಿಕ್ಷಣ ಇಲಾಖೆ, ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಭಾರತ ಸೇವಾದಳ ತಾಲೂಕಾ ಸಮಿತಿಯ ಸಹಯೋಗದಲ್ಲಿ ಭಾರತ ಸೇವಾದಳ ಶತಮಾನೋತ್ಸವ ಆಚರಣೆ ಅಂಗವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ 6 ತಾಲೂಕಿನ ಆಯ್ದ ಶಿಕ್ಷಕರಿಗೆ ಐದು ದಿನಗಳ ಸಹಾಯಕ ಯೋಗ, ನೈತಿಕ ಶಿಕ್ಷಣ ಹಾಗೂ ದೈಹಿಕ ಶಿಕ್ಷಣ ತರಬೇತಿ ಶಿಬಿರವು ಪ್ರಾರಂಭವಾಯಿತು. 6 ತಾಲೂಕುಗಳಿಂದ 108 ಶಿಕ್ಷಣಾರ್ಥಿಗಳು ಹಾಜರಿದ್ದರು. ಬೆಳಿಗ್ಗೆ 9.30 ಘಂಟೆಗೆ ಸರಿಯಾಗಿ ಶಿರಸಿ ತಾಲೂಕಾ ಭಾರತ ಸೇವಾದಳ ಸಮಿತಿ ಅಧ್ಯಕ್ಷ ಅಶೋಕ ಬಿ. ಭಜಂತ್ರಿ ಧ್ವಜಾರೋಹಣವನ್ನು ಮಾಡಿದರು. ನಂತರದಲ್ಲಿ ಶಿಕ್ಷಣಾರ್ಥಿಗಳ ನೋಂದಣಿ ಕಾರ್ಯವು ನಡೆದು ಶಿಕ್ಷಣಾರ್ಥಿಗಳನ್ನು ದಸ್ತಾಗಳಲ್ಲಿ ವಿಭಾಗಿಸಲಾಯಿತು. 12 ಘಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಇವರಿಂದ ಸಭಾ ಕಾರ್ಯಕ್ರಮವು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟನೆಗೊಂಡಿತು. ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸದಾಗಿ ಉದ್ಯೋಗಕ್ಕೆ ಸೇರಿದ ತಮಗೆಲ್ಲರಿಗೂ ಭಾರತ ಸೇವಾದಳದ ತರಬೇತಿಯ ಅಗತ್ಯತೆಯನ್ನು ಮನಗಂಡು ತಮ್ಮನ್ನೆಲ್ಲ ನಿಯೋಜಿಸಿದ್ದೇವೆ. ಗುರು ಎಂಬ ಶ್ರೇಷ್ಠ ಪದವಿ ಈ ಉದ್ಯೋಗಕ್ಕೆ ಹಾಜರಾದ ದಿನದಿಂದ ತಮಗೆ ಲಭಿಸಿದೆ. ಇದು ಎಲ್ಲರಿಗೂ ಸಿಗಲಾದರ ಪವಿತ್ರ ಪದವಿ. ಇಂತಹ ಪದವಿಗೆ ಶ್ರೇಷ್ಠತೆಯನ್ನು ಹೆಚ್ಚಿಸುವ ಕೆಲಸವನ್ನು ಸೇವಾದಳವು ನಿಷ್ಠೆಯಿಂದ ಮಾಡುತ್ತಿದೆ. 100 ವರ್ಷ ತುಂಬುವುದು ಎಂದರೆ ಸಣ್ಣ ವಿಷಯವಲ್ಲ. ಎಷ್ಟೋ ಏಳಬೀಳುಗಳನ್ನು ಕಂಡ ಸೇವಾದಳ ಪ್ರಶಂಸೆಯ ಕಾರ್ಯವನ್ನು ಮಾಡುತ್ತಾ ಬಂದಿದೆ. ತಾವೆಲ್ಲ ಈ ಶಿಕ್ಷಣದ ಪ್ರಯೋಜನ ಪಡೆಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷರಾದ ಭಾರತ ಸೇವಾದಳ ಶಿರಸಿ ಜಿಲ್ಲಾಧ್ಯಕ್ಷ ವಿ. ಎಸ್. ನಾಯ್ಕ ಮಾತನಾಡುತ್ತ ನಾನು ಕೂಡ ರಾಜಕೀಯ ರಂಗದಿಂದ ಬಂದವನು. ನನ್ನ ತಂದೆಯವರು ತಮ್ಮ ಅಂತಿಮ ಸಮಯದಲ್ಲಿ ಒಳ್ಳೆಯ ಕೆಲಸಗಳಿಗಾಗಿ ರಾಜಕೀಯ ಬೇಡ. ಅದು ಯಾರೇ ಮಾಡಿದರೂ ಮೆಚ್ಚಿಕೊಳ್ಳಬೇಕು. ತತ್ವ ಮತ್ತು ಮೌಲ್ಯ ಭರಿತ ಸೇವಕನಾಗು ಎಂದಿದ್ದರು. ಅವರಿಗೆ ಕೊಟ್ಟ ಮಾತಿನಂತೆ ಮನಮೆಚ್ಚುವ ಕೆಲಸವನ್ನು ಮಾಡಿದ್ದೇನೆ. ಅದಕ್ಕೆ ಮೂಲ ಕಾರಣ ಈ ಸೇವಾದಳ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಿ. ಗಣೇಶ ಇವರು ಮಾತನಾಡಿ ಕೆಲವು ಒಲ್ಲದ ಮನಸ್ಸಿನಿಂದ ಇನ್ನು ಕೆಲವು ಅಧಿಕಾರಿಗಳ ಭಯದಿಂದ ಬಂದಿರುವಿರಿ. ನಿಮ್ಮ ಯಾವುದೇ ಸಮಸ್ಯೆ ಬದಿಗಿಟ್ಟು ತರಬೇತಿಯ ಲಾಭ ಪಡೆಯಿರಿ. ಕೇವಲವಾಗಿ ಮಾತನಾಡಿ ಇದು ಅಧಿಕೃತ ತರಬೇತಿ ಅಲ್ಲ. ನಮ್ಮ ಸಮಯ 9.30 ರಿಂದ 4.30 ಎಂಬ ತಪ್ಪು ಮನಸ್ಥಿತಿ ಹೊಂದಿ ಇನ್ನೊಬ್ಬರ ಮನಸ್ಸನ್ನೂ ತಪ್ಪು ದಾರಿಗೆ ಎಳೆದು ತರುವ ಕೆಲಸವನ್ನು ಮಾಡಬೇಡಿ. ಸೇವಾದಳದಂತಹ ಉತ್ತಮ ತರಬೇತಿ ನಿಮಗೆ ಉತ್ತಮವಾದ ಎಲ್ಲವನ್ನೂ ಕಲಿಸಿಕೊಡುತ್ತದೆ ಎಂದರು.

ಮಧ್ಯಾಹ್ನದ ಅವಧಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರೋ. ಕೆ.ಎನ್. ಹೊಸಮನಿ ಜೀವನದ ಮೌಲ್ಯಗಳು ಈ ವಿಷಯವಾಗಿ ಸ್ಥೂಲ ವಿವರಣೆಯೊಂದಿಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಭಾರತ ಸೇವಾದಳದ ರಾಜ್ಯ ಅಧ್ಯಕ್ಷರಾದ ಶಂಕರ ವಿ. ಮೊಗದ ಇವರು ಉಪಸ್ಥಿತರಿದ್ದರು. ತರಬೇತಿಯ ಸಂಪೂರ್ಣ ಲಾಭ ಪಡೆಯಿರಿ. ನಿಮ್ಮ ತರಬೇತಿಯ ಫಲಾನುಭವಿಗಳು ಭವಿಷ್ಯ ರೂಪಿಸುವ ಮಕ್ಕಳಾಗಿರುತ್ತಾರೆ ಎಂಬುದು ನಿಮ್ಮ ಗಮನದಲ್ಲಿರಲಿ. ನಿಮ್ಮ ನಿಷ್ಠೆ ಅಚಲವಾಗಿರಲಿ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ,ಕೆ.ಎಮ್.ಎಫ್. ನಿರ್ದೇಶಕ ಶಂಕರ ಹೆಗಡೆ, ಸುರೇಶ ಬಣವಿ, ಪ್ರದೀಪ ಶೆಟ್ಟಿ, ಸುರೇಶ ಪಟಗಾರ, ಕೋಶಾಧ್ಯಕ್ಷ ಕುಮಾರ ನಾಯ್ಕ , ಸದಸ್ಯ ಕೆ.ಎನ್. ನಾಯ್ಕ, ಬಾಬು ನಾಯ್ಕ,ಸಂಜೀವ ಹೊಸಕೇರಿ, ಪಿ.ಎನ್. ಜೋಗಳೇಕರ, ಶ್ರೀಮತಿ ಪುಷ್ಪಾ ಗೌಡ, ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉದಯಕುಮಾರ ಎಸ್. ಹೆಗಡೆ, ಸುಧಾಮ ಪೈ, ಸರ್ವೇಶ್ವರ ಶೆಟ್ಟಿ, ಶ್ರೀಮತಿ ದಾಕ್ಷಾಯಿಣಿ ಕೊಡಿಯಾ, ಚಂದ್ರಕಾಂತ ತಳವಾರ, ಉಪಸ್ಥಿತರಿದ್ದರು. ಅಶೋಕ ಭಜಂತ್ರಿ ಸ್ವಾಗತಿಸಿದರು. ಸುಧಾಮ ಪೈ ಗೌರವ ರಕ್ಷೆ ನೀಡಿದರು. ಉದಯಕುಮಾರ ಹೆಗಡೆ ನಿರೂಪಿಸಿದರ. ರಾಮಚಂದ್ರ ಹೆಗಡೆ, ಪ್ರಾಸ್ತಾವಿಕ ನುಡಿದರು. ಕುಮಾರ ನಾಯ್ಕ ವಂದಿಸಿದರು. ಹುತಾತ್ಮರ ದಿನಾಚರಣೆ ಅಂಗವಾಗಿ ಒಂದು ನಿಮಿಷದ ಮೌನದೊಂದಿಗೆ ಈ ಮೇಲಿನ ಎಲ್ಲ ಕಾರ್ಯಕ್ರಮಗಳು ಜರುಗಿದವು.

300x250 AD
Share This
300x250 AD
300x250 AD
300x250 AD
Back to top