ಕಾರವಾರ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳ ವರ್ಗಾವಣೆಗೆ ಸರಕಾರ ಆದೇಶ ನೀಡಿದೆ.
ಕಾರವಾರ ಮಹಿಳಾ ಠಾಣೆಯ ಶಶಿಕಾಂತ ವರ್ಮಾ ಶಿರಸಿ ವೃತ್ತಕ್ಕೆ, ಸೈಬರ ಕ್ರೈಂ ಅಪರಾಧ ಠಾಣೆಯ ಇನ್ಸಪೆಕ್ಟರ ಆನಂದಮೂರ್ತಿ ಮೈಸೂರಿನ ಬೆಸ್ಕಾಂ ಜಾಗೃತಿದಳಕ್ಕೆ ವರ್ಗಾವಣೆಗೊಂಡಿದ್ದಾರೆ. ಜೊಯಿಡಾ ಸಿಪಿಐ ಆಗಿ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಚಂದ್ರಶೇಖರ ಹರಿಹರ, ಯಲ್ಲಾಪುರ ಸಿಪಿಐ ಆಗಿ ಕೊಪ್ಪಳ್ಳ ಸೈಬರ ಕ್ರೈಮ್ ಠಾಣೆಯ ಇನ್ಸಪೆಕ್ಟರ ರಮೇಶ ಹಾನಾಪುರ ಅವರನ್ನು , ಕೇಶ್ವಾಪುರ ಇನ್ಸ್ಪೆಕ್ಟರ್ ಉಳಿವೆಪ್ಪ ಸಾತೇನಹಳ್ಳಿ ಅವರನ್ನು ಕಾರವಾರ ಗ್ರಾಮೀಣಕ್ಕೆ ನಿಯುಕ್ತಿ ಮಾಡಲಾಗಿದೆ.