Slide
Slide
Slide
previous arrow
next arrow

ಜೋಯಿಡಾದದಲ್ಲಿ ಸೌಹಾರ್ದತೆಗಾಗಿ ಮಾನವ ಸರಪಳಿ

300x250 AD

ಜೊಯಿಡಾ: ಕರ್ನಾಟಕ ಪ್ರಾಂತ ರೈತ ಸಂಘ ಜೋಯಿಡಾ ತಾಲೂಕು ಘಟಕ ಆಶ್ರಯದಡಿ ಗಾಂಧಿ ಹುತಾತ್ಮ ದಿನದ ನಿಮಿತ್ತ ಸೌಹಾರ್ದತೆಗಾಗಿ ಮಾನವ ಸರಪಳಿ‌ ಕಾರ್ಯಕ್ರಮವನ್ನು ಜೊಯಿಡಾ ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಆರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು. ನಂತರ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಪ್ರೇಮಾನಂದ ವೆಳಿಪ್ ಅವರು ಮಾತನಾಡಿ ಜಾತಿ ಮತ, ಧರ್ಮವನ್ನು ಮೀರಿ ಅನೇಕತೆಯಲ್ಲಿ ಏಕತೆಯನ್ನು ಸಾರುವ ಮೂಲಕ ಸೌಹಾರ್ದತೆಯ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಸಂವಿಧಾನದ ಆಶಯಗಳನ್ನು ಎಲ್ಲರೂ ಪಾಲಿಸಬೇಕೆಂದು ಕರೆ ನೀಡಿದರು.

300x250 AD

ಜೋಯಿಡಾದ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ರಫೀಕ್ ಖಾಜಿ ಅವರು ಮಾತನಾಡಿ ನಾವೆಲ್ಲರೂ ಮನುಷ್ಯರು.‌ ಮಾನವೀಯತೆಯನ್ನು ಮೈಗೂಡಿಸಿಕೊಂಡು ಪರಸ್ಪರ ಸೌಹಾರ್ದತೆಯಿಂದ ಬದುಕನ್ನು ರೂಪಿಸಿಕೊಳ್ಳಬೇಕು. ಜಾತಿ, ಮತ, ಧರ್ಮಗಳ ನಡುವೆ ಇರುವ ಸಂಘರ್ಷವನ್ನು ಬಿಟ್ಟು, ಪರಸ್ಪರ ಐಕ್ಯತೆಯ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ಪ್ರಾಮಣಿಕವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಮಂಗಲಾ ಕಾಂಬ್ಳೆ ಗಾಂಧೀಜಿಯವರ ಆದರ್ಶಗಳನ್ನು ಅರಿತು ನಡೆದುಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಕ.ಪ್ರಾ.ರೈ.ಸಂಘದ ಕಾರ್ಯದರ್ಶಿ ರಾಜೇಶ್ ಗಾವಡಾ ಪ್ರಮುಖರಾದ ಶಾಂತಾ ವೆಳಿಪ್, ಸಂತೋಷ ಮಂಥೆರೊ, ಗೋಕುಲದಾಸ್, ಅನಂತ್ ಪೊಕಳೆ, ಮಾಬಳು ಕುಂಡಲಕರ್, ದತ್ತಾ ಗಾವಡಾ, ಗಣೇಶ ಹೆಗಡೆ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ರಾಜೇಶ್ ಗಾವಡಾ ಸ್ವಾಗತಿಸಿದರು. ಗೀತಾ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top