Slide
Slide
Slide
previous arrow
next arrow

ದಾಂಡೇಲಿಯಲ್ಲಿ ಸೌಹಾರ್ದತೆಗಾಗಿ ಮಾನವ ಸರಪಳಿ

300x250 AD

ದಾಂಡೇಲಿ: ಸಮಾನ ಮನಸ್ಸಿನ ಸಂಘಟನೆಗಳ ವೇದಿಕೆಯ ಆಶ್ರಯದಡಿ “ಸೌಹಾರ್ದ ಕರ್ನಾಟಕ” ಕರೆಯ ಮೇರೆಗೆ ಮಹಾತ್ಮಗಾಂಧೀಜಿಯವರ ಹುತಾತ್ಮ ದಿನವಾದ ಮಂಗಳವಾರ ನಗರದ ಸೋಮಾನಿ ವೃತ್ತದಲ್ಲಿ ಸೌಹಾರ್ದತೆಗಾಗಿ ಕೈಜೋಡಿಸುವ ಅಭಿಯಾನದ ನಿಮಿತ್ತ ಸೌಹಾರ್ದತಾ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಲಾಯಿತು. ನಂತರ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್.ವಾಸರೆ, ಭಾರತೀಯ ಪ್ರಜೆಗಳಾದ ನಾವು, ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಸಾವಿರಾರು ವರುಷಗಳ ಸೌಹಾರ್ದ ಪರಂಪರೆಯನ್ನು ಸ್ಮರಿಸುತ್ತೇವೆ. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಜನತೆಯ ಸಾರ್ವಭೌಮತ್ವವನ್ನು ಮತ್ತು ಈ ಉದಾತ್ತ ಮೌಲ್ಯಗಳನ್ನು ಹೊಂದಿರುವ ನಮ್ಮ ಸಂವಿಧಾನದ ಆಶಯಗಳನ್ನು ದೃಢವಾಗಿ ಪ್ರತಿಪಾದಿಸಬೇಕು ಮತ್ತು ಅನುಸರಿಸಿ‌ ನಡೆದಾಗ ಗಾಂಧಿ ಕಂಡ ರಾಮರಾಜ್ಯ ನಿರ್ಮಾಣವಾಗಲಿದೆ. ಧಾರ್ಮಿಕವಾಗಿ ರಾಮನನ್ನು ಆರಾಧಿಸುವುದೇ ಬೇರೆ. ಆದರೆ ಅಯೋಧ್ಯೆಯಲ್ಲಿ ಪ್ರಭು ರಾಮಚಂದ್ರ ಸರ್ವರನ್ನು ಸಮಾನಾಗಿ ಕಂಡು ರಾಜ್ಯಭಾರ ನಿರ್ವಹಿಸಿದ ರೀತಿಯಲ್ಲಿ ಈ ದೇಶ‌ ನಡೆದಾಗ ಮಾತ್ರ ಗಾಂಧಿಯವರ ರಾಮ ರಾಜ್ಯದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದರು. ಗಾಂಧೀಜಿಯವರು ಹುತಾತ್ಮರಾದ ದಿನ ಇಂದಾದರೂ, ಆದರೆ ಈ‌ ದಿನ ನಾವು ಗಾಂಧಿಜೀಯವರನ್ನು ಕೊಂದ ದಿನ. ಇದು ಸಂಭ್ರಮಿಸುವ ದಿನವಲ್ಲ. ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ನಾವು ನೀವೆಲ್ಲರೂ ಮುಂದಾಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಸಮಿತಿಯ ಸದಸ್ಯರಾದ ಡಿ.ಸ್ಯಾಮಸನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪೂಜಾರ್, ನಗರಸಭಾ ಸದಸ್ಯ ಮೋಹನ ಹಲವಾಯಿ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೋಸೂರು, ಅಸಂಘಟಿತ ಕಾರ್ಮಿಕರ ಸಂಘಟನೆಯ ಅಧ್ಯಕ್ಷರಾದ ರಾಜೇಸಾಬ ಕೇಸನೂರು ಮೊದಲಾದವರು ಶಾಂತಿ, ಸೌಹಾರ್ದತೆಯ ರಾಷ್ಟ್ರ ನಿರ್ಮಾಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

300x250 AD

ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ರತ್ನದೀಪ.ಎನ್. ಎಂ ಪ್ರತಿಜ್ಞಾವಿಧಿ ಭೋಧಿಸಿದರು. ಸಿಐಟಿಯು ಸಂಚಾಲಕ ಸಲೀಂ ಸೈಯದ್ ವಂದಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಬ್ಲಾಕ್ ಕಾಂಗ್ರೆಸ್ ಹಾಗೂ‌ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು,ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ನಗರ ಸಭಾ ಸದಸ್ಯರು, ಸಿಐಟಿಯು, ಸಿಪಿಐ(ಎಂ), ಡಿವೈಎಫ್ಐ, ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟ, ಪೌರಕಾರ್ಮಿಕ ಸಂಘಟನೆ, ಮಾನವ ಹಕ್ಕುಗಳ‌ ಸಂಘಟನೆ, ಜನವಾದಿ ಮಹಿಳಾ ಸಂಘಟನೆ, ಕಾರ್ಮಿಕ‌ ಸಂಘಟನೆಗಳ ಮುಖಂಡರು,ಸದಸ್ಯರು, ಪ್ರಗತಿಪರ ಚಿಂತಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top