Slide
Slide
Slide
previous arrow
next arrow

ಕಾಣೆಯಾದವರ ಬಗ್ಗೆ ಪ್ರಕಟಣೆ

300x250 AD

ಕಾರವಾರ:ಮಹಮ್ಮದ್ ರಿಹಾನ್(14 ವರ್ಷ), ಸಾ:ಟೊಂಕಾ-2, ಕಾಸರಕೋಡ, ತಾ: ಹೊನ್ನಾವರ ಇವನು ಜ.16 ರಂದು ಸಂಜೆ 5-30 ಗಂಟೆಗೆ ಟೊಂಕಾ-2ದಲ್ಲಿರುವ ತನ್ನ ಮನೆ ಮುಂದೆ ಆಟವಾಡುತ್ತಿದ್ದಾಗ ಅಪಹರಣವಾಗಿದ್ದಾನೆ.
ಕಾಣೆಯಾದ ಬಾಲಕನ ಚಹರೆ: ದುಂಡನೆಯ ಮುಖ, ಗೋಧಿ ಮೈ ಬಣ್ಣ, ಸದೃಡ ಮೈಕಟ್ಟು, 4.2 ಅಡಿ ಎತ್ತರ, ಕನ್ನಡ, ಉರ್ದು,ಹಿಂದಿ,ಕೊಂಕಣಿ ಭಾಷೆ ಮಾತನಾಡುತ್ತಾನೆ. ಹೊನ್ನಾವರ ನ್ಯೂ ಇಂಗ್ಲೀಷ ಶಾಲೆಯಲ್ಲಿ 8 ನೇ ತರಗತಿ ಓದುತ್ತಿರುತ್ತಾನೆ. ತಿಳಿ ಗುಲಾಬಿ ಹಾಗೂ ಗ್ರೇ ಬಣ್ಣದ ಟಿ ಶರ್ಟ್ ,ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈ ಬಾಲಕನು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಹೊನ್ನಾವರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ TEL:+9108387220248 ,ಮೊಬೈಲ್ ನಂ. TEL:+919480805270ಸಂಪರ್ಕಿಸುವಂತೆ ಎಂದು ಹೊನ್ನಾವರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top