ಕಾರವಾರ: ಕೊಂಕಣ ರೈಲ್ವೇ ಭೂಸ್ವಾದೀನದ ಹೆಚ್ಚುವರಿ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 28ಂ ಪ್ರಕರಣ ಇತ್ಯರ್ಥ ಆದ ಪ್ರಕರಣಗಳ ಬಗ್ಗೆ ಕೂಡಲೇ ಪರಿಹಾರ ಬಟವಾಡೆ ಮಾಡುವುದಾಗಿ ಕೊಂಕಣ್ ರೈಲ್ವೇ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಹೇಳಿದರು.
ಸೋಮವಾರ ಅಮದಳ್ಳಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಶಾಸಕರು, ಈ ಕುರಿತು ಇತ್ತೀಚೆಗೆ ನಡೆದ ಕೊಂಕಣ್ ರೈಲ್ವೇ ಗ್ರಾಹಕರ ಸಲಹಾ ಸಮಿತಿ ಸಭೆಯಲ್ಲಿ ವಿಧಾನ ಸಭಾ ವತಿಯಿಂದ ಸದರಿ ಸಭೆಯ ಸದಸ್ಯನಾಗಿ ನೇಮಿಸಲ್ಪಟ್ಟ ತಾನು ಈ ಕುರಿತು ವಿಷಯ ಎತ್ತಿದ್ದು ಅದಕ್ಕೆ ಉತ್ತರಿಸಿದ್ದ ಕೊಂಕಣ್ ರೈಲ್ವೇ ಮುಖ್ಯಾಧಿಕಾರಿ ಶೀಘ್ರ ಪರಿಹಾರ ವಿತರಣೆ ಕಾರ್ಯ ನಡೆಸುವುದಾಗಿ ತಿಳಿಸಿದರು. ಈ ಕುರಿತು ತಾನು ಇನ್ನೊಮ್ಮೆ ಕೊಂಕಣ ರೈಲ್ವೇ ಕೇಂದ್ರ ಕಚೇರಿ ಮಹಾರಾಷ್ಟ್ರದ ಬೇಳಾಪುರಕ್ಕೆ ತೆರಳಿ ಒತ್ತಾಯ ಮಾಡುವುದಾಗಿ ಅಮದಳ್ಳಿ ಕೊಂಕಣ ರೈಲ್ವೇ ನಿರಾಶ್ರಿತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಿಳಿಹೇಳಿದರು.