Slide
Slide
Slide
previous arrow
next arrow

ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷರಾಗಿ ನಾಗರಾಜ್ ಆಯ್ಕೆ

300x250 AD

ಮುಂಡಗೋಡ: ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ತಾಲೂಕಿನ ಕನ್ನಡಮ್ಮ ದಿನಪತ್ರಿಕೆ ಮತ್ತು ವಿಶ್ವವಾಣಿ ದಿನಪತ್ರಿಕೆಯ ವರದಿಗಾರ ಹಿರಿಯ ಪತ್ರಕರ್ತ ಮುಂಡಗೋಡಿನ ನಾಗರಾಜ್ ಅರ್ಜುನ್ ದೈವಜ್ಞ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಪ್ರೆಸ್ಸ್ ಕ್ಲಬ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಯ್ಕ ಭಟ್ಕಳ ಸೂಚನೆಯ ಮೇರೆಗೆ ಕರ್ನಾಟಕ ಪ್ರೆಸ್ಸ್ ಕ್ಲಬ್ ರಾಜ್ಯ ಅಧ್ಯಕ್ಷ ದಯಾನಂದ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಎಸ್.ಜಿ. ಮುಂಡಗೊಡಿನ ಹಿರಿಯ ಪತ್ರಕರ್ತ ನಾಗರಾಜ ಅರ್ಜುನ್ ದೈವಜ್ಞ ಉತ್ತರ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಆದೇಶ ಪತ್ರದಲ್ಲಿ ನ್ಯಾಯ, ನೀತಿ, ಸತ್ಯ ಮತ್ತು ಪತ್ರಿಕಾ ಧರ್ಮವನ್ನು ಪಾಲಿಸಿ ಕಾರ್ಯ ನಿರ್ವಹಿಸುವಂತೆ ತಿಳಿಸಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಸಂಘಟನೆಯನ್ನು ಬೆಳೆಸುವುದರ ಜೊತೆಗೆ ಪತ್ರಕರ್ತರಿಗೆ ಕಷ್ಟದ ಸಮಯದಲ್ಲಿ ಸಹಾಯ ಸಹಕಾರ ನೀಡುವಂತೆ ಹಾಗೂ ಜಿಲ್ಲೆಯಲ್ಲಿ ಸದಾ ಬಡ ಜನರ ಧ್ವನಿಯಾಗಿ , ಭ್ರಷ್ಟರ ವಿರುದ್ಧ ಹೋರಾಟ ನಡೆಸುವಂತೆ ತಿಳಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top