ದಾಂಡೇಲಿ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಷ್ಟಿತ ಜಿ.ಎಸ್.ಅಜ್ಜೀಬಳ ಪ್ರಶಸ್ತಿಗೆ ಆಯ್ಕೆಯಾಗಿದ್ದ ದಾಂಡೇಲಿಯ ಮನೆ ಮಗಳು ಎಂಬ ಪ್ರೀತಿಗೆ ಪಾತ್ರರಾಗಿರುವ ನಗರದ ಗಣೇಶನಗರಲ್ಲಿ ಹುಟ್ಟಿ ಬೆಳೆದು, ಯಲ್ಲಾಪುರದಲ್ಲಿ ವಾಸವಾಗಿರುವ ಪತ್ರಕರ್ತೆ ಪ್ರಭಾವತಿ ಜಯರಾಜ ಅವರು ಭಾನುವಾರ ಶಿರಸಿಯಲ್ಲಿ ಆಯೋಜಿಸಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.