ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವು ಶುಕ್ರವಾರದಂದು ಅದ್ದೂರಿಯಾಗಿ ನಡೆಯಿತು. ಆ ಸಮಯದಲ್ಲಿ ಶಾಲಾ ಮುಂಭಾಗದ ಮಹಾದ್ವಾರ ಮತ್ತು ಗೇಟ್ ವನ್ನು ಶಿರಸಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪ್ರಕಾಶ್ ಗುನಗಿ ಉದ್ಘಾಟಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಹಾಗೂ ಕಿರು ನಾಟಕ ಪ್ರದರ್ಶನಗೊಂಡಿತು.
ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಆಗಲು ಎರಡು ತಿಂಗಳಗಳಿಂದ ಮುಂದಾಳತ್ವವಹಿಸಿ ಶಾಲಾ ಕಾರ್ಯಚಟುವಟಿಕೆಗಳ ರೂವಾರಿ 6 ತಿಂಗಳುಗಳ ಕಾಲ ದೇವಳಮಕ್ಕಿಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿವಂಗತ ಉಮೇಶ್ ಗುನಗಿ ಅವರನ್ನು ಸ್ಮರಣಿಸಿ ಅವರ ಕುಟುಂಬಸ್ಥರನ್ನು ಜೊತೆ ಅದೇ ರೀತಿ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೇವಳಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಗೌಡ, ಉಪಾಧ್ಯಕ್ಷೆ ಕೋಮಲಾ ದೇಸಾಯಿ, ಸದಸ್ಯರಾದ ಪ್ರತೀಕ್ಷಾ ವೈಂಗಣಕರ, ಉಪ ವಲಯ ಅರಣ್ಯಾಧಿಕಾರಿ ಸುಭಾಷ್ ರಾಥೋಡ್, ಎಸ್ ಡಿ ಎಂ ಸಿ ಅಧ್ಯಕ್ಷೆ ಭಾಗ್ಯ ಭಟ್ಟ, ಆದರ್ಶ ವಿದ್ಯಾಲಯ ಮುಖ್ಯಾಧ್ಯಾಪಕ ಸಂತೋಷ ನಾಯ್ಕ,ಗ್ರಾಮಸ್ಥರಾದ ಶ್ರೀಪಾದ ಭಟ್, ಯಾದೋಬ್ ನಾಯ್ಕ, ಚಂದ್ರಕಾಂತ ಗೌಡ, ಸಂತೋಷ ಶೇಟ್, ಸುಧೀರ್ ನಾಯ್ಕ, ಗಜಾನನ ನಾಯ್ಕ, ದೀಪಕ ಹಳದೀಪುರ, ನಿವೃತ್ತ ಶಿಕ್ಷಕರಾದ ಗೋಪಾಲಕೃಷ್ಣ ರಾಣೆ, ಶೀಲಾ ಸಾವಂತ್,ಪ್ರಭಾರಿ ಶಿಕ್ಷಕಿ ಎಲ್ಸಿ ಅಲ್ಮೇಡಾ, ಅಕ್ಷತಾ ಉಮೇಶ್ ಗುನಗಿ, ಪಲ್ಲವಿ ಗುನಗಿ, ಪವನಾ ಗುನಗಿ, ಶಾಲಾ ಶಿಕ್ಷಕರು ಎಸ್ ಡಿ ಎಂ ಸಿ ಸದಸ್ಯರು, ಪಾಲಕರು ಮತ್ತಿತರು ಉಪಸ್ಥಿತರಿದ್ದರು.