Slide
Slide
Slide
previous arrow
next arrow

ಇಂದು ದಾಂಡೇಲಿಗೆ ಡಾ. ಮುರುಗರಾಜೇಂದ್ರ ಸ್ವಾಮೀಜಿ ಭೇಟಿ

300x250 AD

ದಾಂಡೇಲಿ : ತಾಲೂಕಿನ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶ್ರೇಯಸ್ ಪೇಪರ್ ಮಿಲ್ ಹತ್ತಿರ ಇರುವ ಶ್ರೀ.ಸದ್ಗುರು ಯಲ್ಲಾಲಿಂಗೇಶ್ವರ ಮಠದ ಶಾಖಾ ಮಠಕ್ಕೆ ಮುಗಳಖೋಡ ಸುಕ್ಷೇತ್ರ ಮಠದ ಪೀಠಾಧಿಪತಿಗಳಾದ ಶ್ರೀ.ಷಡಕ್ಷರಿ ಶಿವಯೋಗಿ ಡಾ: ಮುರುಗರಾಜೇಂದ್ರ ಮಹಾಸ್ವಾಮಿಜಿಯವರು ಇಂದು (ಜ:28ರಂದು) ಬೆಳಿಗ್ಗೆ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ 11.30 ಗಂಟೆಗೆ ನಗರದ ಪಟೇಲ್ ವೃತ್ತದ ಹತ್ತಿರದಲ್ಲಿರುವ ಶ್ರೀ.ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಪೂಜ್ಯ ಸ್ವಾಮೀಜಿಯವರು ಮಾಲಾರ್ಪಣೆ ಮಾಡಲಿದ್ದು, ಅದಾದ ಬಳಿಕ ಅಲ್ಲಿಂದ ಭವ್ಯ ಮೆರವಣಿಗೆಯ ಮೂಲಕ ಪೂಜ್ಯರನ್ನು ಶ್ರೀ.ಸದ್ಗುರು ಯಲ್ಲಾಲಿಂಗೇಶ್ವರ ಮಠಕ್ಕೆ ಬರಮಾಡಿಕೊಳ್ಳಲಾಗುತ್ತದೆ. ನಂತರ ಶ್ರೀ.ಸದ್ಗುರು ಯಲ್ಲಾಲಿಂಗೇಶ್ವರ ಮಠದಲ್ಲಿ ನೂತನ ಕಟ್ಟಡದ ಉದ್ಘಾಟನೆ ಹಾಗೂ ಪೂಜ್ಯಶ್ರೀಗಳ ಪಾದಪೂಜೆ ಮತ್ತು ಧರ್ಮಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮ ಮುಗಿದ ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ.ಸದ್ಗುರು ಯಲ್ಲಾಲಿಂಗೇಶ್ವರ ಮಠದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.

300x250 AD
Share This
300x250 AD
300x250 AD
300x250 AD
Back to top