Slide
Slide
Slide
previous arrow
next arrow

ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಗಣರಾಜ್ಯೋತ್ಸವ ಆಚರಣೆ

300x250 AD

ಕುಮಟಾ: ತಾಲೂಕಿನ ಮಿರ್ಜಾನ್ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಬಿಜಿಎಸ್ ಸೆಂಟ್ರಲ್ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಭಾರತೀಯ ಸೈನ್ಯದ ನಿವೃತ್ತ ಸುಭೇದಾರ್ ಗಣೇಶ ಎಲ್. ನಾಯ್ಕ ಧ್ವಜಾರೋಹಣ ನೇರವೇರಿಸಿ ತಾವು ಭಾರತೀಯ ಸೈನ್ಯ ಸೇರಿದ ಬಗ್ಗೆ ಮತ್ತು ದೇಶಪ್ರೇಮ, ಶಿಸ್ತಿನ ಬಗ್ಗೆ ತಮ್ಮ ಸ್ಪೂರ್ತಿದಾಯಕ ದೇಶಪ್ರೇಮದ ಮಾತುಗಳಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಆಡಳಿತಾಧಿಕಾರಿಗಳಾದ ಜಿ. ಮಂಜುನಾಥ ಮಾತನಾಡಿ ಗಣರಾಜ್ಯೋತ್ಸವ ಆಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರು ಮತ್ತು ಉದ್ದಿಮೆದಾರರು ಆದ ವಿಷ್ಣು ಪಟಗಾರ, ಹಿರಿಯ ಶಿಕ್ಷಕರಾದ ಎಂ.ಜಿ. ಹಿರೇಕುಡಿ, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶೀಮತಿ ಲೀನಾ ಎಂ. ಗೊನೇಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ಪ್ರತಿನಿಧಿ ಪ್ರಥಮ ಭಂಡಾರಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಣ್ಯರಿಗೆ ವಂದನೆ ಸಲ್ಲಿಸಿ ಧ್ವಜಾರೋಹಣಕ್ಕೆ ಕರೆದೊಯ್ದದ್ದು ವಿಶೇಷವಾಗಿತ್ತು.

ವಿದ್ಯಾರ್ಥಿಗಳ 4ತಂಡಗಳಾದ ಯುನಿಟಿ, ಪೀಸ್, ಕರೇಜ್ ಮತ್ತು ಸ್ಟ್ರೆಂಥ್ ನಡುವೆ ಪಥಸಂಚಲನದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಆಕರ್ಷಕ ಪಥಸಂಚಲನದ ಸ್ಪರ್ಧೆಯಲ್ಲಿ ಯುನಿಟಿ ತಂಡ ಪ್ರಥಮ ಮತ್ತು ಸ್ಟ್ರೆಂಥ್ ತಂಡ ದ್ವಿತೀಯ ಸ್ಥಾನ ಗಳಿಸಿದವು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಡಂಬಲ್ಸ್ ಮತ್ತು ಲೇಝಿಮ್ಸ ಪ್ರದರ್ಶನ ಆಕರ್ಷಕವಾಗಿತ್ತು. ಕುಮಾರಿ ಹನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ದಿವ್ಯಜ್ಯೋತಿ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ವಿದ್ಯಾರ್ಥಿನಿ ಪ್ರತಿನಿಧಿ ಸುಮನ್ ಉಪ್ಪಾರ್ಕರ್ ಪ್ರತಿಜ್ಞಾ ವಿಧಿ ಬೋಧಿಸಿದಳು. ಪೃಥ್ವಿ ಮತ್ತು ಸಂಗಡಿಗರು ಧ್ವಜಗೀತೆ ಹಾಡಿದರು. ವಿದ್ಯಾರ್ಥಿಗಳು ಭಾಷಣ ಮಾಡಿದರು ಮತ್ತು ದೇಶಭಕ್ತಿಗೀತೆ ಹಾಡಿದರು. ಕುಮಾರಿ ರೋಶನಿ ನದಾಫ್ ಕಾರ್ಯಕ್ರಮ ನಿರೂಪಿಸಿದಳು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯಕ, ವೈಭವ ಗಾಂವಕರ ಮತು ನಾಗರತ್ನ ನಾಯ್ಕ ಪಥಸಂಚಲನ ಮತ್ತು ವಿವಿಧ ಕವಾಯತುಗಳಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕ ರಮೇಶ ನಾಯ್ಕ ಪಥಸಂಚಲನದ ಬಗ್ಗೆ ವೀಕ್ಷಕ ವಿವರಣೆಯನ್ನು ನೀಡಿದರು. ಕುಮಾರಿ ಮನಸ್ವಿ ನಾಯಕ ವಂದಿಸಿದಳು. ಶಿಕ್ಷಕ ಮನೋಜ ಗುನಗ ಕಾರ್ಯಕ್ರಮವನ್ನು ಚಿತ್ರೀಕರಿಸಿ ಸಹಕರಿಸಿದರು. ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top