Slide
Slide
Slide
previous arrow
next arrow

ಶಿವಾಜಿ‌ ಮಹಾವಿದ್ಯಾಲಯ ಶತಮಾನೋತ್ಸವ: ಗಣ್ಯರು ಭಾಗಿ

300x250 AD

ಹಳಿಯಾಳ: ಪಟ್ಟಣದ ಶ್ರೀ ಶಿವಾಜಿ ಮಹಾ ವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದ ಕುರಿತು ಶನಿವಾರ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಘೋಟ್ನೆಕರ್, ಖ್ಯಾತ ವೈದ್ಯರಾದ ಡಾ.ಮೋಹನ ಪಾಟೀಲ್, ಮುಖಂಡರಾದ ಸತ್ಯಜೀತ್ ಗಿರಿ, ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ, ಅಧಿಕಾರಿಗಳು, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು,ಮುಖಂಡರು ಹಾಗೂ ಪಟ್ಟಣದ ಹಿರಿಯರು ಉಪಸ್ಥಿತರಿದ್ದರು.

300x250 AD

ಕಳೆದ ಎರಡು ವರ್ಷಗಳಿಂದ ಆರ್.ವಿ.ದೇಶಪಾಂಡೆಯವರ ಗರಡಿಯಿಂದ ಹೊರಬಂದು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಎಲ್.ಘೋಟ್ನೇಕರ್ ದೇಶಪಾಂಡೆಯವರ ಜೊತೆ ವೇದಿಕೆ‌ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಒಂದೇ ವೇದಿಕೆಯಲ್ಲಿ ಇಬ್ಬರು ಕಾಣಿಸಿಕೊಂಡರಾದರೂ ಪರಸ್ಪರ ಒಬ್ಬರನ್ನೊಬ್ಬರು ಮುಖ ನೋಡದೆ ಸಭೆಯಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top