ಯಲ್ಲಾಪುರ : ರಾಜ್ಯದ ಪ್ರಸಿದ್ಧ ಸಾಹಿತಿ ಬಿ.ಎಚ್. ಶ್ರೀಧರರ ಹೆಸರಿನಲ್ಲಿ ನೀಡಲಾಗುತ್ತಿರುವ ರಾಜ್ಯ ಮಟ್ಟದ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ಪ್ರಸಿದ್ಧ ಸಾಹಿತಿ, ಅನುವಾದಕ ಚಂದ್ರಕಾಂತ ಪೋಕಳೆಯವರನ್ನು ವಿಮರ್ಶಕ ಡಾ|| ಎಂ.ಜಿ. ಹೆಗಡೆಯವರಿರುವ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಇವರ ಮರಾಠಿ ಕನ್ನಡ ಅನುವಾದ ಕೃತಿಗಳು ಗಮನ ಸೆಳೆದಿವೆ. ಯಲ್ಲಾಪುರದ ಮಂಚಿಕೇರೆ ಇವರ ಹುಟ್ಟೂರಾಗಿದ್ದು, ವಿಶ್ರಾಂತ ಪ್ರಾಚಾರ್ಯರಾಗಿ ಬೆಳಗಾವಿಯಲ್ಲಿ ನೆಲೆಸಿದ್ದಾರೆ.
ಚಕ್ರ, ಮಾನು, ಶ್ವಪಥ, ಉಚಲ್ಯಾ, ಒಂದೊಂದೇ ಎಲೆ ಉದುರಿದಾಗ, ಕುಣಿಯಘುಮಾ, ಪಾಣಿಪತ ಮುಂತಾದ 60 ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. 2004 ರಲ್ಲಿ ಇವರ “ಮಹಾನಾಯಕ” ಕಾದಂಬರಿ ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕೆಡೆಮಿ ಬಹುಮಾನ ದೊರೆತಿದೆ, ಹಾಗೂ ಅನೇಕ ಪ್ರಶಸ್ತಿಗಳು ದೊರೆತಿವೆ. ಬಿ.ಎಚ್. ಶ್ರೀಧರರ ಜನ್ಮ ದಿನ 24-4-2024 ರಂದು ಶಿರಸಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರೂ. 10,000/- ನಗದು, ನೆನಪಿನ ಕಾಣಿಕೆ, ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸುವರೆಂದು ಸಮಿತಿಯ ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.