Slide
Slide
Slide
previous arrow
next arrow

ಡಾ.ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯೋತ್ಸವ ಸಂಪನ್ನ

300x250 AD

ಹೊನ್ನಾವರ: ಒಕ್ಕಲಿಗರ ಸಮುದಾಯ ಭವನದಲ್ಲಿ ಇತ್ತೀಚಿಗೆ ನಡೆದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರಿ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಹಾಗೂ ತಾಲೂಕಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಿರ್ಜಾನಿನ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಮಾಡಿದ ಸೇವಾ ಕೈಂಕರ್ಯ ಮತ್ತು ಅವರು ಎಲ್ಲಾ ಸಮಾಜದ ಏಳಿಗೆಗಾಗಿ ಯಾವೆಲ್ಲಾ ಕಾರ್ಯಗಳನ್ನು ಕೈಗೊಂಡಿದ್ದರು, ಅವರ ಸಮಾಜ ಸೇವೆಗೆ ಯಾವೆಲ್ಲಾ ಪ್ರಶಸ್ತಿಗಳು ಅವರಿಗೆ ದೊರಕಿತ್ತು ಎನ್ನುವುದನ್ನು ಸ್ಮರಿಸಿದರು. ಎಲ್ಲರೂ ಪೂಜ್ಯರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಸುಂದರವಾದ ಸುಶಿಕ್ಷಿತ ಸಮಾಜ ನಿರ್ಮಾಣವಾಗಲಿದೆ ಎಲ್ಲರೂ ಈ ನಿಟ್ಟಿನಲ್ಲಿ ಚಿಂತಿಸಬೇಕು, ಪ್ರತಿ ಮನೆಯಲ್ಲಿಯೂ ಮಕ್ಕಳಿಗೆ ಅವಶ್ಯವುಳ್ಳ ಶಿಕ್ಷಣವನ್ನು ನೀಡಬೇಕೆಂದು ತಿಳಿಸಿದರು. ವಿಧ್ಯಾರ್ಥಿಗಳಿಗೆ ಮತ್ತು ಆಗಮಿಸಿದ ಎಲ್ಲರಿಗೂ ಶ್ರೀರಾಮನ ಶ್ಲೋಕ ವನ್ನು ಹೇಳಿಕೊಡುವ ಮೂಲಕ ರಾಮಮಂದಿರ ಲೋಕಾರ್ಪಣೆಗೆ ಶುಭಕೋರಿದರು ನಂತರ ವಿಧ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಗಣಪಯ್ಯ ಗೌಡ, ಮುಗಳಿ, ಕೃಷ್ಣ ಗೌಡ, ಮಾವಿನಕುರ್ವಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಜಿ. ಗೌಡ, ಉಪಾಧ್ಯಕ್ಷರಾದ ಮಹಾಬಲ ಗೌಡ, ಯುವ ವೇದಿಕೆ ಅಧ್ಯಕ್ಷರಾದ ವಾಸು ಗೌಡ ತಲಗೋಡ, ಕರ್ನಾಟಕ ರಕ್ಷಣಾ ವೇದಿಕೆ ಅಧಕ್ಷರಾದ ಮಂಜುನಾಥ ಗೌಡ ಒಕ್ಕಲಿಗರ ಸಂಘ, ಭೈರವಿ ಮಹಿಳಾ ಸಹಕಾರಿ ಸಂಘ ಮತ್ತು ಒಕ್ಕಲಿಗರ ಯುವ ವೇದಿಕೆಯ ಸದಸ್ಯರುಗಳು, ಸಮಾಜದ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಪಾಲಕರು ಸಮಾಜಬಾಂಧವರು ಉಪಸ್ಥಿತರಿದ್ದರು. ಸಂಘದ ಪ್ರದಾನ ಕಾರ್ಯದರ್ಶಿ ಬಾಲಚಂದ್ರ ಗೌಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ಗಣಪಯ್ಯ ಈರ ಗೌಡ, ಮಾಳಕೋಡ ಇವರು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಇತರೆ ಶಿಕ್ಷರೊಂದಿಗೆ ನಿರ್ವಹಿಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top