ಜೊಯಿಡಾ: ತಾಲೂಕಿನಾದ್ಯಂತ ಸಂಭ್ರಮ ಸಡಗರಗಳ ನಡುವೆ 75 ನೆ ಗಣತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಕಾರ್ಯಕ್ರಮ ತಹಶಿಲ್ದಾರ ಕಚೇರಿ ಎದುರು ನಡೆಯಿತು. ಧ್ವಜಾರೋಹಣ ನಡೆಸಿ ಮಾತನಾಡಿದ ತಹಶಿಲ್ದಾರ ಮಂಜುನಾಥ ಮನ್ನೊಳೀ ದೇಶದ ಪ್ರಗತಿಗಾಗಿ ಕೇಂದ್ರ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ನಮ್ಮ ದೇಶ ಅಭಿವೃದ್ಧಿಯಲ್ಲಿ ವಿಶ್ವದ ಇತರ ದೇಶಗಳಿಗೆ ಮಾದರಿಯಾಗಿದೆ. ಅದೇ ರೀತಿ ನಮ್ಮ ದೇಶದ ಆಡಳಿತಕ್ಕೆ ಸಂವಿಧಾನ ಅಂಗೀಕರಿಸಿದ ಈ ದಿನ ನಾವೆಲ್ಲ ಸ್ಮರಿಸಬೇಕಾದ ದಿನ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಲವಾರು ದೇಶಭಕ್ತಿ ಕಾರ್ಯಕ್ರಮಗಳು ನಡೆದವು. ಬಹುಮಾನ ವಿತರಣೆ ನಡೆಯಿತು. ಎಲ್ಲಾ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಎನ್. ಸಿ.ಸಿ ವಿದ್ಯಾರ್ಥಿಗಳು ಮೆರಗನ್ನು ನೀಡಿದರು.
ಸಿಪಿಐ ನಿತ್ಯಾನಂದ ಪಂಡಿತ್ ಪಿಎಸ್ಐ ಮಹೇಶ್ ಮಾಳಿ ಮಹಿಳಾ ಪಿಎಸ್ಐ ಮಾದೇವಿ ಅವರು ಉತ್ತಮ ಶಿಸ್ತನ್ನ ತಂದಿದ್ದರು. ಗ್ರಾಮಸ್ಥರು ಸೇರಿದಂತೆ ಕೆಪಿಸಿಸಿ ಸದಸ್ಯ ಸದಾನಂದ ದಬಗಾರ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ , ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ , ಜೆಡಿಎಸ್ ಅಧ್ಯಕ್ಷ ಅಜಿತ್ ತೊರವತ್ ತಾಪಂಕಾನಿ ಅಧಿಕಾರಿ ಆನಂದ ಬಡಕುಂದ್ರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.