Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಸಡಗರದ ಗಣರಾಜ್ಯೋತ್ಸವ ಆಚರಣೆ

300x250 AD

ಶಿರಸಿ: ಲಯನ್ಸ್ ಶಾಲೆಯ ಪ್ರಾಂಗಣದಲ್ಲಿ 75ನೇ ಗಣರಾಜ್ಯೋತ್ಸವಕ್ಕೆ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು, ಶ್ವೇತ ವಸ್ತ್ರಧಾರಿಗಳಾದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪಾಲಕವೃಂದ, ಶಾಲೆಯ ಹಿರಿಯ ವಿದ್ಯಾರ್ಥಿಗಳು,, ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ  ಸದಸ್ಯರು, ಕ್ಲಬ್ ಸದಸ್ಯರು, ಊರ ನಾಗರಿಕರು ಸಡಗರದಿಂದ ಉಪಸ್ಥಿತರಿದ್ದರು. ಪ್ರಸ್ತುತ ವರ್ಷದ ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ MJF ಲಯನ್ ಪ್ರಭಾಕರ್  ಹೆಗಡೆ ಧ್ವಜಾರೋಹಣ ನಡೆಸಿ, ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಬ್ರಿಟಿಷ್ ಆಡಳಿತದಿಂದಾಗಿ ಒಳ್ಳೆಯ ಆಚಾರ ವಿಚಾರ ಶ್ರದ್ಧೆ ಹಾಗೂ ಸಂಸ್ಕೃತಿಗಳ ಪರಂಪರೆ ಇದ್ದ ಗುರುಕುಲ ಪದ್ಧತಿ ನಶಿಸಿ ಹೋಯಿತು. ಆದರೂ ಭಾರತ ಇಂದು ಕ್ಷಿಪ್ರಗತಿಯಲ್ಲಿ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿದೆ.ಮಹಿಳೆಯರು ಕೂಡಾ ಎಲ್ಲ ಕ್ಷೇತ್ರದಲ್ಲೂ ಮುಂದುವರೆದಿದ್ದಾರೆ. ಅಯೋಧ್ಯೆಯ ಕನಸು ಕೂಡ ನನಸಾಯಿತು. ಈ ಎಲ್ಲಾ ಹೆಮ್ಮೆಯ ಸಂಗತಿಗಳನ್ನು ಕುರಿತು ಹಂಚಿಕೊಳ್ಳಲು ಸಂತೋಷವಾಗುತ್ತಿದೆ ಎನ್ನುತ್ತ ಭಾರತದ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಒಳ್ಳೆಯ ನಾಗರಿಕರಾಗಿ ಬಾಳಿ ಎಂದು ಕರೆ ನೀಡಿದರು. ಶಾಲೆಯ ದೈಹಿಕ ಶಿಕ್ಷಕರಾದ ನಾಗರಾಜ ಜೋಗ್ಳೇಕರ್, ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರ್, ಗೈಡ್ ಕ್ಯಾಪ್ಟನ್ ಚೇತನಾ ಪಾವಸ್ಕರ್ ಮುಂದಾಳತ್ವದಲ್ಲಿ ಶಿಸ್ತುಬದ್ಧ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಾಲೆಯ ಇತರ ವಿದ್ಯಾರ್ಥಿಗಳೊಂದಿಗೆ ಪಥ ಸಂಚಲನ ನಡೆಸಿದರು.

ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ.ರವಿ ನಾಯಕ್, ಪ್ರಾಸ್ತಾವಿಕ ನುಡಿಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವದ ಬಗ್ಗೆ ತಿಳಿಸಿ, ಸರ್ವರನ್ನು ಸ್ವಾಗತಿಸಿದರು . ಲಯನ್ಸ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ MJF ಲಯನ್ ಕೆ.ಬಿ.ಲೋಕೇಶ್ ಹೆಗಡೆ, ಸಹ ಕಾರ್ಯದರ್ಶಿಗಳಾದ ಲ.ವಿನಯ್ ಹೆಗಡೆ, ಕೋಶಾಧ್ಯಕ್ಷರಾದ MJF ಲಯನ್ ಉದಯ್ ಸ್ವಾದಿ, ಸದಸ್ಯರಾದ ಲ.ತ್ರಿವಿಕ್ರಮ್ ಪಟವರ್ಧನ್, ಲಯನ್ ಶ್ರೀಕಾಂತ್ ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ ಜೆ ಎಫ್ ಲಯನ್ ಅಶೋಕ್ ಹೆಗಡೆ, ಕಾರ್ಯದರ್ಶಿ ಲಯನ್ ಜ್ಯೋತಿ ಅಶ್ವತ್ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಸಮೂಹ ಶಾಲೆಗಳ ಪ್ರಾಂಶುಪಾಲರಾದ ಶಶಾಂಕ ಹೆಗಡೆ   ವಂದನಾರ್ಪಣೆ ನಡೆಸಿಕೊಟ್ಟರು.ಶ್ರೀಮತಿ ಅನಿತಾ ಭಟ್ ಮತ್ತು ಶ್ರೀಮತಿ ರೇಷ್ಮಾ ಮಿರಾಂದಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಹ ಶಿಕ್ಷಕಿಯರಾದ ಶ್ರೀಮತಿ ಸಂಧ್ಯಾ ಭಟ್ ಮತ್ತು ಶ್ರೀಮತಿ ಲಕ್ಷ್ಮಿ ಅಮೀನ್ ಇವರ ಮಾರ್ಗದರ್ಶನದಲ್ಲಿ ರಾಷ್ಟ್ರಭಕ್ತಿ ಸಾರುವ ಗೀತೆಗಳಿಗೆ ಮನೋಹರವಾಗಿ ನೃತ್ಯ ಪ್ರದರ್ಶನ ನೀಡಿದರು. ಮತ್ತು ದೈಹಿಕ ಶಿಕ್ಷಕಿ ಶ್ರೀಮತಿ ಚೇತನಾ ಪಾವಸ್ಕರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕವಾಯಿತು ನೃತ್ಯ ಪ್ರದರ್ಶನವನ್ನು ನೀಡಿದರು. ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಹೆಗಡೆ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ರಾಷ್ಟ್ರಗೀತೆ , ಧ್ವಜ ಗೀತೆ ಮತ್ತು ವಂದೇ ಮಾತರಂ ಹಾಡನ್ನು ಹಾಡಿದರು.

300x250 AD
Share This
300x250 AD
300x250 AD
300x250 AD
Back to top