ಯಲ್ಲಾಪುರ: ನಬಾರ್ಡ್ ಉತ್ತರ ಕನ್ನಡ ಹಾಗೂ ನೆಲಸಿರಿ ರೈತ ಉತ್ಪಾದಕ ಕಂಪನಿ ಶಿರಸಿ ಸಹಕಾರದಲ್ಲಿ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಉತ್ಪಾದನೆ & ಮಾರುಕಟ್ಟೆ ಕುರಿತ ತರಬೇತಿ ಕಾರ್ಯಾಗಾರವನ್ನು ಜ.27, ಶನಿವಾರದಂದು ಬೆಳಿಗ್ಗೆ 10 ಗಂಟೆಯಿಂದ ವಿ.ಎಸ್.ಎಸ್.ಉಮ್ಮಚಗಿ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಎಸ್.ಎಸ್.ಉಮ್ಮಚಗಿ ಅಧ್ಯಕ್ಷ ಎಂ.ಜಿ.ಭಟ್ ಸಂಕದಗುಂಡಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಬಾರ್ಡ್ ಡಿಡಿಎಂ ರೇಜಿಸ್ ಇಮ್ಯಾನ್ಯುವಲ್, ನೆಲಸಿರಿ ಎಫ್‌ಪಿಒ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸುಜಯ್ ಭಟ್ ಅವರಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಗೆ ಸರಕಾರದ ಸಹಾಯಧನ ಯೋಜನೆ ಮಾಹಿತಿ, ಸುಚೇತ ಹೆಗಡೆ ಸಣ್ಣಕೇರಿ ಇವರಿಂದ ಕೇಕ್ ತಯಾರಿಕೆ ತರಬೇತಿ, ಮಮತಾ ಹೆಗಡೆ ಶಮೆಮನೆ ಅವರಿಂದ ಆಹಾರೋದ್ಯಮದ ಸಾಧಕ ಬಾಧಕ ವಿಚಾರ ವಿನಿಮಯ ಗೋಷ್ಠಿ ನಡೆಯಲಿದೆ.