ಶಿರಸಿ: ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಶಿರಸಿ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಇದರ ಸುವರ್ಣ ಮಹೋತ್ಸವ ಜ.28 ರಂದು ನಗರದ ಮಾರ್ಕೆಟ್ ಯಾರ್ಡ್ನ ಟಿ.ಆರ್.ಸಿ ಸಭಾಂಗಣದಲ್ಲಿ ಜರುಗಲಿದೆ.
ಅಂದು ಬೆಳಿಗ್ಗೆ 11 ಘಂಟೆಗೆ ದಿ.ಜಿ.ಎಸ್.ಹೆಗಡೆ ಅಜ್ಜೀಬಳ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಜಿ.ಯು.ಭಟ್ ಹೊನ್ನಾವರ ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಲೋಗೋ ಅನಾವರಣ ಮಾಡಲಿದ್ದು, ಶಾಸಕ ಭೀಮಣ್ಣ ನಾಯ್ಕ ಕ್ಯಾಲೆಂಡರ್ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕ್ಷೇಮನಿಧಿ ಕೂಪನ್ ಬಿಡುಗಡೆ, ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ವಾರ್ಷಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆಗೊಳಿಸಲಿದ್ದು, ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟ , ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಪಾಲ್ಗೊಳ್ಳಲಿದ್ದಾರೆ. ಕೆಯುಡಬ್ಲ್ಯೂಜೆಎ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಯುಕೆಡಬ್ಲ್ಯುಜೆಎ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್, ಕೆಯುಡಬ್ಲ್ಯುಜೆಎ ಕಾರ್ಯಕಾರಣಿ ಸದಸ್ಯ ಬಸವರಾಜ ಪಾಟೀಲ, ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಯುಕೆಡಬ್ಲ್ಯುಜೆಎ ಖಜಾಂಚಿ ರಾಜೇಂದ್ರ ಶಿಂಗನಮನೆ ಗೌರವ ಉಪಸ್ಥಿತರಿರಲಿದ್ದಾರೆ. ಯುಕೆಡಬ್ಲ್ಯುಜೆಎ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಪತ್ರಿಕಾ ಮಂಡಳಿ ಸಾಗಿ ಬಂದ ದಾರಿ ಕುರಿತು ಮಾತನಾಡಲಿದ್ದಾರೆ. ಜಿಲ್ಲಾ ಪತ್ರಿಕಾ ಮಂಡಳಿ, ಸಂಘದ ಮಾಜಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಿ, ಗೌರವಿಸಲಾಗುತ್ತದೆ.
ಮಧ್ಯಾಹ್ನ 3 ಘಂಟೆಗೆ ಗೋಷ್ಠಿ ನಡೆಯಲಿದ್ದು, ಪತ್ರಿಕಾ ಮಾಧ್ಯಮದ ಸವಾಲುಗಳ ಕುರಿತು ಸಂಜೆ ದರ್ಪಣ ಪತ್ರಿಕೆ ಸಂಪಾದಕ ಗಣಪತಿ ಗಂಗೊಳ್ಳಿ, ಮಾಧ್ಯಮ ಲೋಕದಲ್ಲಿ ಆತ್ಮಾವಲೋಕನ ಕುರಿತು ವಿಜಯ ಕರ್ನಾಟಕದ ಹಿರಿಯ ಪತ್ರಕರ್ತ ಶಶಿಧರ ನಂದಿಕಲ್ಲ, ಸಾಮಾಜಿಕ ಜಾಲತಾಣ ಪತ್ರಿಕೋದ್ಯಮದ ನಡೆ ಕುರಿತು ಸಂಯುಕ್ತ ಕರ್ನಾಟಕ ಸಿಇಓ ಮೋಹನ ಹೆಗಡೆ, ಗಾಳಿ ಸುದ್ದಿ, ಸಂದಾಯ ಸುದ್ದಿ ನಡುವೆ ಓದುಗ ಕುರಿತು ಕಸ್ತೂರಿ ಮಾಸಪತ್ರಿಕೆ ಸಂಪಾದಕ ಶಾಂತಲಾ ಧರ್ಮರಾಜ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಅಶೋಕ ಹಾಸ್ಯಗಾರ, ಗೋಪಾಲಕೃಷ್ಣ ಆನವಟ್ಟಿ ಪಾಲ್ಗೊಳ್ಳಲಿದ್ದಾರೆ. ಯುಕೆಡಬ್ಲ್ಯುಜೆಎ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ ಉಪಸ್ಥಿತರಿರಲಿದ್ದಾರೆ.
ಸಂಜೆ 4.30 ಘಂಟೆಗೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಕೆಯುಡಬ್ಲ್ಯುಜೆಎ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಶಾಸಕರಾದ ದಿನಕರ ಶೆಟ್ಟಿ, ಸತೀಶ ಸೈಲ್, ವಿಧಾನಪರಿಷತ್ತು ಸದಸ್ಯ ಗಣಪತಿ ಉಳ್ವೇಕರ, ಸ್ಕೋಡ್ ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ, ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಲಿದ್ದಾರೆ. ಯುಕೆಡಬ್ಲ್ಯುಜೆಎ ಕಾರ್ಯದರ್ಶಿಗಳಾದ ಅನಂತ ದೇಸಾಯಿ, ಸುಮಂಗಲಾ ಅಂಗಡಿ ಗೌರವ ಉಪಸ್ಥಿತರಿರಲಿದ್ದಾರೆ.
ಪ್ರಶಸ್ತಿ ಪ್ರದಾನ: 2023ನೆಯ ಸಾಲಿನ ಕೆ.ಶ್ಯಾಮ್ ರಾವ್ ಪ್ರಶಸ್ತಿ ಪುರಸ್ಕೃತ ನಾಗರಾಜ ಭಟ್ಟ ಸಿದ್ದಾಪುರ, ಜಿ.ಎಸ್.ಹೆಗಡೆ ಅಜ್ಜೀಬಳ ಪುರಸ್ಕಾರ ಪಡೆದ ಪತ್ರಕರ್ತರಾದ ಶಾಂತೇಶಕುಮಾರ ಬೆನಕನಕೊಪ್ಪ ಮುಂಡಗೋಡ, ಎಂ.ಜಿ.ನಾಯ್ಕ ಕುಮಟಾ, ಪ್ರಭಾವತಿ ಜಯರಾಜ ಯಲ್ಲಾಪುರ, ಸಂದೇಶ ದೇಸಾಯಿ ಜೊಯಿಡಾ, ರಾಘವೇಂದ್ರ ಹೆಬ್ಬಾರ ಭಟ್ಕಳ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಂಜೆ 6.30 ರಿಂದ ಪತ್ರಿಕಾ ಮಾಧ್ಯಮದ ಕುಟುಂಬದವರಿಂದ ಮನರಂಜನಾ ಕಾರ್ಯಕ್ರಮ ಮತ್ತು ಆಯ್ದ ಕಲಾವಿದರಿಂದ ಸಂಗೀತ ಸುಧೆ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ತಿಳಿಸಿದ್ದಾರೆ.
ಜಿ.ಎಸ್.ಹೆಗಡೆ ಅಜ್ಜೀಬಳ ಸೇರಿದಂತೆ ಅನೇಕ ಮಹನೀಯರ ನಿಸ್ವಾರ್ಥ ಸೇವೆಯಿಂದ ಜಿಲ್ಲಾ ಪತ್ರಿಕಾ ಮಂಡಳಿಯು ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಸುವರ್ಣ ಮಹೋತ್ಸವದ ಅಂಗವಾಗಿ ಒಂದು ವರ್ಷ ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ತಿಂಗಳಿಗೊಂದು ಕಾರ್ಯಕ್ರಮ ಆಯೋಜಿಸಲಾಗುತ್ತದೆ. 2024 ಡಿಸೆಂಬರ್ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. -ಜಿ.ಸುಬ್ರಾಯ ಭಟ್ಟ ಬಕ್ಕಳ, ಜಿಲ್ಲಾಧ್ಯಕ್ಷರು