Slide
Slide
Slide
previous arrow
next arrow

ಸತ್ಕಾರ್ಯಗಳಿಗೆ ಮಾಡುವ ದಾನದಿಂದ ಶ್ರೇಯಸ್ಸು ಲಭ್ಯ: ಮಾಧವಾನಂದ ಶ್ರೀ

300x250 AD

ಸಿದ್ದಾಪುರ; ತಾಲೂಕಿನ ಕಂಚಿಕೈ ಗ್ರಾಮದ ಶಿರಗುಣಿಯ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವದ ಎರಡನೇ ದಿನವಾದ ಗುರುವಾರ ಶ್ರೀದೇವರ ಪುನಃ ಪ್ರತಿಷ್ಠಾಪನೆ ವಿಧ್ಯುಕ್ತವಾಗಿ ನೆರವೇರಿತು.

ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮಿಗಳವರು ಪುನಃ ಪ್ರತಿಷ್ಠಾಪನೆ ನೆರವೇರಿಸಿ ಧರ್ಮ ಸಂದೇಶ ನೀಡಿದರು. ಸಮಾಜದಲ್ಲಿ ಸಾಮರ್ಥ್ಯ ಇದ್ದವರು ಸರಿಯಾಗಿ ದಾನ ಮಾಡಬೇಕು. ತಮ್ಮ ಶಕ್ತಿಗೆ ಅನುಸಾರವಾಗಿ ಸತ್ಕರ್ಮಗಳಿಗೆ ಪುಣ್ಯ ಕಾರ್ಯಗಳಿಗೆ ದಾನ ಮಾಡುವುದರಿಂದ ಶ್ರೇಯಸ್ಸು ಸಿಗುತ್ತದೆ ಎಂಬುದಾಗಿ ಶ್ರೀಗಳು ನುಡಿದರು.

ಮನುಷ್ಯರಾದವರು ದೇವರ ಸಂಬಂಧದಿಂದ ಜೀವನದಲ್ಲಿ ಸುಖವನ್ನು ಕಾಣುತ್ತಾರೆ. ಅದಕ್ಕೆ ಬೇಕಾದ ಶ್ರದ್ಧೆ ಭಕ್ತಿಯನ್ನು ಪ್ರತಿಯೊಬ್ಬರೂ ನಿತ್ಯ ಹಾಗೂ ನೈಮಿತ್ತಿಕ ಅನುಷ್ಠಾನ ಇಟ್ಟುಕೊಂಡು ಆಚರಿಸಬೇಕು ಎಂದರು.
ವಿ. ವಿಶ್ವನಾಥ ಭಟ್ಟ ನೀರಗಾನ ಪ್ರಾಸ್ತಾವಿಕ ಮಾತನಾಡಿ, ಈ ದೇವಸ್ಥಾನ ಹನ್ನೊಂದು ಶತಮಾನಗಳಷ್ಟು ಹಿಂದಿನದ್ದಾಗಿದೆ. ಈ ದೇವಸ್ಥಾನಕ್ಕೂ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೂ ಸಂಬಂಧವನ್ನು ಪ್ರಾಚೀನರು ಗುರುತಿಸಿ ತೋರಿಸುತ್ತಾರೆ. ಆದರೆ ಯಾವುದೋ ಕಾಲಘಟ್ಟದಲ್ಲಿ ಶಿಥಿಲವಾಗುತ್ತ ಬಂದಿತ್ತು. ನಂತರದಲ್ಲಿ ಇಲ್ಲಿ ವಿಶೇಷವಾದ ಸಾನಿಧ್ಯವನ್ನು ಗುರುತಿಸಿದ ಭಕ್ತರು ಪುನಃ ಪ್ರತಿಷ್ಠಾ ಕಾರ್ಯವನ್ನು ಇಟ್ಟುಕೊಂಡಿದ್ದಾರೆ. ಗುರುಗಳ ಸಾನ್ವಿಧ್ಯದಲ್ಲಿ ಈ ಕಾರ್ಯ ನೆರವೇರಿರುವುದು ನಮ್ಮೆಲ್ಲರ ಅಹೋಭಾಗ್ಯವಾಗಿದೆ ಎಂದರು.

ಅಷ್ಟಬಂಧ ಮಹೋತ್ಸವದ ಪ್ರಧಾನ ಆಚಾರ್ಯತ್ವ ವಹಿಸಿದ ಶ್ರೀ ಕ್ಷೇತ್ರ ಮುರುಡೇಶ್ವರದ ಪ್ರಧಾನ ಅರ್ಚಕ ವೇ. ಜಯರಾಮ ಅಡಿ, ಪುರೋಹಿತರಾದ ವೇ. ಮಂಜುನಾಥ ಭಟ್ಟ ವಾಟೆಕೊಪ್ಪ ಮುಂತಾದವರು ಪಾಲ್ಗೊಂಡರು.

300x250 AD

ಮೂರನೆಯ ದಿನವಾದ ಜ. 27ರಂದು ಹೋಮಗಳ ಪೂರ್ಣಾಹುತಿ, ಬ್ರಹ್ಮ ಕಲಶಾಭಿಷೇಕ, ಬಲಿಪೂಜೆ, ಮುಂತಾದ ವಿಧಿ ವಿಧಾನಗಳು ಹಾಗೂ ರಾತ್ರಿ ಯಕ್ಷಗಾನ ಕಲಾ ಪ್ರದರ್ಶನ ನಡೆಯಲಿದೆ.

Share This
300x250 AD
300x250 AD
300x250 AD
Back to top