Slide
Slide
Slide
previous arrow
next arrow

ಭೀಕರ ಅಪಘಾತ: ಮೂವರ ದುರ್ಮರಣ

300x250 AD

ಜೊಯಿಡಾ: ತಾಲ್ಲೂಕಿನಿಂದ ದಾಂಡೇಲಿಗೆ ಹೋಗುವ ರಸ್ತೆಯಲ್ಲಿರುವ ಚೌಕನಗಾಳಿ ಎಂಬಲ್ಲಿ ಸ್ಕೂಟಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ.

ಮೃತ ಮೂವರು ಯುವಕರು ದಾಂಡೇಲಿ ನಗರದ ನಿವಾಸಿಗಳಾಗಿದ್ದು, ಜೋಯಿಡಾದಿಂದ ಸ್ಕೂಟಿ ವಾಹನದಲ್ಲಿ (ಕೆಎ:65, ಜೆ:2383) ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ದಾಂಡೇಲಿಯ ನಿವಾಸಿಗಳಾದ ರಾಕೇಶ್ ಮಹದೇವಪ್ಪ ಬಡಿಗೇರ್, ರಿತೇಶ್ ಸುಬ್ರಹ್ಮಣ್ಯ ನಾಯರ್ ಮತ್ತು ಕೃಷ್ಣ ಹೊನ್ನೂರಯ್ಯ ಹರಿಜನ ಸ್ಥಳದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

300x250 AD

ಘಟನಾ ಸ್ಥಳಕ್ಕೆ ಜೋಯಿಡಾ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಶಾಸಕರಾದ ಆರ್.ವಿ. ದೇಶಪಾಂಡೆ ಕಳವಳ ವ್ಯಕ್ತಪಡಿಸಿದ್ದು, ಇದು ಬಹಳ ಆಘಾತ ಹಾಗೂ ನೋವು ತಂದಿರುವ ಘಟನೆಯಾಗಿದೆ ಎಂದಿದ್ದಾರೆ.

Share This
300x250 AD
300x250 AD
300x250 AD
Back to top