Slide
Slide
Slide
previous arrow
next arrow

ದೇಶ ಸುಭದ್ರಗೊಳಿಸುವ ಕಾರ್ಯ ಶಾಲೆಯಿಂದ ಪ್ರಾರಂಭ: ದಿನಕರ ಶೆಟ್ಟಿ

300x250 AD

ಕುಮಟಾ: ತಾಲೂಕಿನ ಹೊಲನಗದ್ದೆ ಗ್ರಾ. ಪಂ. ವ್ಯಾಪ್ತಿಯ ತೆಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವೇಕ ಕೊಠಡಿಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಶಿಕ್ಷಣ,ಆರೋಗ್ಯ, ಕುಡಿಯುವ ನೀರು, ರಸ್ತೆ-ಸೇತುವೆಗಳ ಅಭಿವೃದ್ಧಿಗಾಗಿ ನನ್ನ ಅಧಿಕಾರಾವಧಿಯಲ್ಲಿ ವಿಶೇಷವಾಗಿ ಶ್ರಮಿಸಿದ್ದೇನೆ. ಇತರೆ ಅಭಿವೃದ್ಧಿ ಕಾರ್ಯಗಳು ಕೊಂಚ ವಿಳಂಬವಾದರು ಪರವಾಗಿಲ್ಲ. ಆದರೆ ಶಿಕ್ಷಣಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಪೂರೈಸಲು ತಡವಾಗಬಾರದು. ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಶಾಲೆಗಳು ನಿರ್ವಹಿಸುತ್ತವೆ. ತನ್ಮೂಲಕ ದೇಶದ ಭವಿಷ್ಯವನ್ನು ಸುಭದ್ರಗೊಳಿಸುವ ಕಾರ್ಯ ಶಾಲೆಯಿಂದಲೇ ಪ್ರಾರಂಭವಾಗುತ್ತದೆ. ಆದ್ದರಿಂದ ಶಾಲೆಗಳ ಅಭಿವೃದ್ಧಿ ಅತೀಮುಖ್ಯ. ಅಗತ್ಯವಿರುವ ಶಾಲೆಗಳಲ್ಲಿ ಹೊಸ ವರ್ಗಕೋಣೆಗಳನ್ನು ಒದಗಿಸುವ ಸಲುವಾಗಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವೇಕ ಶಾಲೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಅಡಿಯಲ್ಲಿ ತೆಪ್ಪದ ಶಾಲೆಗೆ ಒಂದು ಹೊಸ ಕೊಠಡಿಯನ್ನು ಒದಗಿಸಿಕೊಟ್ಟಿದ್ದೇನೆ. ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಡೆದುಕೊಳ್ಳಲಿ ಎಂದು ಹೇಳಿದರು.

300x250 AD

ಹೊಲನಗದ್ದೆ ಗ್ರಾಮಪಂಚಾಯತ್ ಅಧ್ಯಕ್ಷ ಎಮ್.ಎಮ್. ಹೆಗಡೆ, ಉಪಾಧ್ಯಕ್ಷ ಮಹಾಂತೇಶ್ ಹರಿಕಾಂತ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್. ಭಟ್, ಜಿ.ಪಂ. ಸಹಾಯಕ ಅಭಿಯಂತರೆ ದೀಪಾ ಶಟಗೇರಿ, ಹೊಲನಗದ್ದೆ ಗ್ರಾಮಪಂಚಾಯತ್ ಸದಸ್ಯರುಗಳಾದ ಮಹಾದೇವಿ ಮುಕ್ರಿ, ದೀಪಾ ಹಿಣಿ, ದತ್ತಾತ್ರೇಯ ಪಟಗಾರ, ಸಾವಿತ್ರಿ ಪಟಗಾರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗಣೇಶ ಪಟಗಾರ, ಮುಖ್ಯಶಿಕ್ಷಕಿ ಸ್ಮಿತಾ ಎಸ್ ಜೈವಂತ ಹಾಗೂ ಇತರರು ಇದ್ದರು.

Share This
300x250 AD
300x250 AD
300x250 AD
Back to top