Slide
Slide
Slide
previous arrow
next arrow

ಉಗ್ರನ ಜೊತೆಗೆ ಭಟ್ಕಳದ ಆಜಾದ್ ನಗರದ ಮಹಿಳೆಯ ನಂಟು; ತನಿಖೆ

300x250 AD

ಭಟ್ಕಳ: ಉಗ್ರನ ಜೊತೆ ಭಟ್ಕಳದ ಮಹಿಳೆಯೋರ್ವಳು ಹೊಂದಿರುವ ನಂಟು ಹಿನ್ನೆಲೆಯಲ್ಲಿ ಮುಂಬೈನ ಎಟಿಎಸ್ ತಂಡಕ್ಕೆ ಆಗಮಿಸಿದ್ದು ಭಟ್ಕಳದ ಪುರಸಭೆ ವ್ಯಾಪ್ತಿಯ ಆಜಾದ್ ನಗರದ ಮಹಿಳೆಯ ಮನೆಗೆ ಬುಧವಾರದಂದು ಭೇಟಿ ನೀಡಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿರುವ ಘಟನೆ ವರದಿಯಾಗಿದೆ.

ಮುಂಬೈನ ನಾಸಿಕನ ಉಗ್ರ ಹುಜೈಫ್ ಅಬ್ದುಲ್ ಅಜೀಜ್ ಶೇಖ್(30) ಇತನು ಭಟ್ಕಳಕ್ಕೆ ಜನವರಿ 17 ರಂದು ಜಾಲಿಯ ಆಜಾದ್ ನಗರದ ಮಹಿಳೆಯ ಜೊತೆ ಸಂಪರ್ಕದಲ್ಲಿದ್ದರ ಕುರಿತಾದ ಖಚಿತ ಮಾಹಿತಿ ಮೇರೆಗೆ ಭಟ್ಕಳಕ್ಕೆ ಮುಂಬೈನ ಎಟಿಎಸ್ ತಂಡವು ಪರಿಶೀಲನೆಗೆ ಬುಧವಾರ ಸಂಜೆ 5 ಗಂಟೆ ವೇಳೆಗೆ ಈಕೆಯ ಮನೆಗೆ ಸ್ಥಳೀಯ ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಹೋಗಿ ವಿಚಾರಣೆ ನಡೆಸಿದ್ದಾರೆ.

ನೇರವಾಗಿ ಈಕೆಯ ಮನೆಗೆ ತೆರಳಿದ ಎಟಿಎಸ್ ತಂಡದ ಐದು ಅಧಿಕಾರಿಗಳು ಈಕೆಗೆ ಉಗ್ರ ಅಜೀಜ್ ಶೇಜ್ ಅವರೊಂದಿಗಿನ ಸಂಬಂಧ ಹಾಗೂ ಸಂಪರ್ಕದ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಪರಿಶೀಲನೆಯ ವೇಳೆ ಮಹಿಳೆಯು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾಳೆಂದು ಮೂಲಗಳಿಂದ ಲಭ್ಯವಾಗಿದೆ.

ಉಗ್ರ ಹುಜೈಪ್ ಅಬ್ದುಲ್ ಅಜೀಜ್ ಶೇಕ ಇವನು ಜನವರಿ 23 ರಂದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಈತನನ್ನು ಬಂಧಿಸಿದ ವೇಳೆ ಆತನ ಜೊತೆಗೆ ಇರುವವರ ಸಂಪರ್ಕದಲ್ಲಿರುವವರ ಪತ್ತೆಯ ವೇಳೆ ಭಟ್ಕಳದ ಮಹಿಳೆಯೊಂದಿಗೆ ಸದ್ಯ ಸಂಪರ್ಕದಲ್ಲಿರುವುದು ತಿಳಿದು ಬಂದಿದ್ದು ಈ ಮಾಹಿತಿಯನ್ನಾಧರಿಸಿ ಭಟ್ಕಳಕ್ಕೆ ಅಧಿಕಾರಿಗಳು ಆಗಮಿಸಿದ್ದಾರೆ.

ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮಹಿಳೆಯು ಆನ್ಲೈನ್ ನಲ್ಲಿ ಅರೇಬಿಕ್ ಭಾಷೆಯ ಪಾಠವನ್ನು ಬೋಧಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಹಾಗೂ ಈಕೆಯು ಮದುವೆಯಾಗಿದ್ದು ಗಂಡ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದವನು ಮೃತಪಟ್ಟಿರುವ ಬಗ್ಗೆಯು ಮತ್ತು ಸದ್ಯ ಈಕೆಯ ತಂದೆಗೆ 7 ಜನ ಹೆಣ್ಣುಮಕ್ಕಳು ಇದ್ದು ಇವಳು ಗಂಡ ಮೃತಪಟ್ಟ ನಂತರ ತಂದೆ ತಾಯಿಯೊಂದಿಗೆ ವಾಸವಾಗಿದ್ದಾಳೆ.

300x250 AD

ಉಗ್ರನ ಜೊತೆಗೆ ಈಕೆಯು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ನಂತರ ಇಬ್ಬರಲ್ಲಿಯು ಸ್ನೇಹ ಬೆಳೆದು ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಪ್ರಮುಖವಾಗಿ ಮಹಿಳೆ ಉಗ್ರನಿಗೆ ತನ್ನ ಬ್ಯಾಂಕ್ ಖಾತೆಯಿಂದ ಆಗಾಗ ಹಣ ವರ್ಗಾವಣೆ ಮಾಡಿರುವ ಬಗ್ಗೆ ತಿಳಿಸಿದ್ದು ಇವರಿಗೆ ಒಟ್ಟು 5 ಲಕ್ಷ ರೂಪಾಯಿ ಉಗ್ರನ ಖಾತೆಗೆ ವರ್ಗಾವಣೆ ಮಾಡಿರುವ ಬಗ್ಗೆ ಮಹಿಳೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ.

ಇನ್ನು ಉಗ್ರ ಅಜೀಜ್ ಶೇಕ್ ಭಟ್ಕಳಕ್ಕೆ ಜ.17 ರಂದು ಬಂದಿದ್ದು ತಾಲೂಕಿನ ಖಾಸಗಿ ಲಾಡ್ಜವೊಂದರಲ್ಲಿ ಈಕೆಯು ಆತನೊಂದಿಗೆ ಉಳಿದಿದ್ದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಭಟ್ಕಳದಲ್ಲಿ ಎರಡು ದಿನದ ತನಕ ಮಹಿಳೆಯ ತನಿಖೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ.

Share This
300x250 AD
300x250 AD
300x250 AD
Back to top