ಕಾರವಾರ: ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ‘ಗೃಹಜ್ಯೋತಿ’ ಯೋಜನೆಯನ್ನು ಈಗಾಗಲೇ ಚಾಲನೆಗೊಳಿಸಿದ್ದು, ಶೇ.15 ರಷ್ಟು ಗ್ರಾಹಕರು ನೋಂದಣಿಯನ್ನು ಮಾಡಿಕೊಂಡಿರುವುದಿಲ್ಲ. ನೋಂದಣಿ ಮಾಡಿಕೊಳ್ಳದೇ ಇರುವ ಗ್ರಾಹಕರು ಕಾರವಾರ ಉಪ ವಿಭಾಗೀಯ ಕಚೇರಿಗೆ ವಿದ್ಯುತ್ ಬಿಲ್ಲು, ಆಧಾರ ಕಾರ್ಡ ಹಾಗೂ ಆಧಾರ್ ಲಿಂಕ್ ಇರುವ ಮೊಬೈಲ್ ನೊಂದಿಗೆ ತಂದು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಕಾರವಾರ ಉಪ ವಿಭಾಗದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.