Slide
Slide
Slide
previous arrow
next arrow

ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ನೂತನ ಶಾಖಾ ಕಟ್ಟಡ ಲೋಕಾರ್ಪಣೆ

300x250 AD

ಅಂಕೋಲಾ: ಜಿಲ್ಲೆಯ ಹಳೆಯ ಸಹಕಾರಿ ಸಂಘಗಳಲ್ಲಿ‌ ಒಂದಾದ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ ರಾಮನಗುಳಿಯ ಮೊದಲ‌ ಶಾಖಾ ಕಟ್ಟಡ ಹಳವಳ್ಳಿಯಲ್ಲಿ ಜನವರಿ 22 ರಂದು ಶುಭಾರಂಭ ಕಂಡಿದೆ.

ತಾಲೂಕಾ ಕೇಂದ್ರದಿಂದ ದೂರದಲ್ಲಿರುವ ಹಳವಳ್ಳಿ ಗ್ರಾಮದಲ್ಲಿ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಕಟ್ಟಡ ಧಾರ್ಮಿಕ ಕಾರ್ಯಕ್ರಮದ ಮೂಲಕ ಕಾರ್ಯ ಪ್ರಾರಂಭಿಸಿದೆ. ಗುಡ್ಡಗಾಡು ಪ್ರದೇಶವಾದ ಡೋಂಗ್ರಿ, ಬಿದ್ರಳ್ಳಿ, ಹಳವಳ್ಳಿ, ಕನಕನಹಳ್ಳಿ ಭಾಗದವರಿಗೆ ಯಾವುದೇ ವ್ಯವಹಾರಕ್ಕೆ ದೂರದ ರಾಮನಗುಳಿಗೆ ಹೋಗಬೇಕಿತ್ತು. ಇದೀಗ ರಾಮನಗುಳಿಯ ಶಾಖಾ ಕಟ್ಟಡ ಹಳವಳ್ಳಿ ಆರಂಭಗೊಂಡಿರುವುದು ಸಾವಿರಾರು ಜನರ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ‌. ಪಿವಿಸಿ ಸಾಮಾಗ್ರಿಗಳು, ಕಟ್ಟಡ ಸಾಮಗ್ರಿಗಳು, ಸೇವಾ ಸಂಘದ ಇತರೆ ಸೇವೆಗಳ ಸೌಲಭ್ಯಗಳು ಈ ಶಾಖೆಯಿಂದ ಸಿಗಲಿದೆ. ಈ ಸಂದರ್ಭದಲ್ಲಿ ಸೊಸೈಟಿ ನಿರ್ಮಿಸಲು ಜಾಗವನ್ನು ನೀಡಿದ ಪರಮೇಶ್ವರ ನಾಯ್ಕ ಮದ್ದನಮನೆ ದಂಪತಿಗಳನ್ನು ಹಾಗೂ ಇಂಜಿನಿಯರ್ ಎಸ್.ವಿ. ಭಟ್ಟ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

300x250 AD

ಬಹಳ ವರ್ಷಗಳಿಂದ ಹಳವಳ್ಳಿ ಭಾಗದ ಜನರ ಕನಸು ಇಂದು ನನಸಾಗಿದೆ. ಸೊಸೈಟಿಯ ಹಿಂದಿನ ಆಡಳಿತ ಮಂಡಳಿ ಹಾಗೂ ಈಗಿನ ಆಡಳಿತ ಮಂಡಳಿಯವರ ಸಹಕಾರದಿಂದ ಇಂದು ನಮ್ಮ ಸಂಘದ ಶಾಖಾ ಕಟ್ಟಡ ಲೋಕಾರ್ಪಣೆಗೊಳಿಸಿದ್ದೇವೆ. – ಗೋಪಾಲಕೃಷ್ಣ ವೈದ್ಯ
ಅಧ್ಯಕ್ಷರು ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ

Share This
300x250 AD
300x250 AD
300x250 AD
Back to top