ಕಾರವಾರ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ನನ್ನ ಭಾರತ ಯೋಜನೆಯಡಿಯಲ್ಲಿ ಆಯ್ದ 30 ಯುವ ಜನರಿಗೆ ರಸ್ತೆ ಸುರಕ್ಷತೆಯ ಕುರಿತು ಒಂದು ವಾರಗಳ ಕಾಲ ಉಚಿತ ತರಬೇತಿಯು ಇತ್ತಿಚಿಗೆ ಕಾರವಾರ ನಗರದಲ್ಲಿ ನಡೆಯಿತು. ನಗರದ ರಸ್ತೆಗಳಲ್ಲಿ ಹೇಗೆ ವಾಹನಗಳಿಗೆ ಸೂಚನೆ ನೀಡುವುದು, ರಸ್ತೆ ಸೂಚನೆಗಳು ಮತ್ತು ಕೈ ಸಂಕೇತಗಳನ್ನು ತೋರಿಸುವುದು ಸೇರಿದಂತೆ ಮುಂತಾದ ರಸ್ತೆ ಸುರಕ್ಷತೆಯ ಕುರಿತು ತರಬೇತಿಯನ್ನು ನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಲೋಕೇಶ ದೇವರೆಡ್ಡಿ ಹಾಗೂ ಗದಿಗೆಪ್ಪ ಚಕ್ರಸಾಲಿ ಅವರು ನೀಡಿದರು. ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಯುವ ಅಧಿಕಾರಿ ಯಶವಂತ ಯಾದವ ಇತರರು ಉಪಸ್ಥಿತರಿದ್ದರು.