ಕಾರವಾರ: “ಪರಾಕ್ರಮ್ ದಿವಾಸ್”ಅಂಗವಾಗಿ ಕೇಂದ್ರೀಯ ವಿದ್ಯಾಲಯ, ನೇವಲ್ಬೇಸ್, ಅರ್ಗಾ, ಕಾರವಾರದಲ್ಲಿ ಮಂಗಳವಾರ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಅಶೋಕ್ ಕುಮಾರ್ , ನೇತಾಜಿ ಸುಭಾಷ್ಚಂದ್ರ ಬೋಸ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆಯನ್ನು ವಿವರಿಸಿದರು. ವಿದ್ಯಾರ್ಥಿನಿ ಪ್ರಿಯಾ ಸೊರೌತೆ ಕವಿತೆ ವಾಚಿಸಿದರು. ವಿದ್ಯಾರ್ಥಿಗಳಿಗೆ ಸ್ಲೋಗನ್ ರೈಟಿಂಗ್, ಪ್ರಬಂಧ ಬರಹ, ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. “ಪರಾಕ್ರಮ್ ದಿವಾಸ್” ಜೊತೆಗೆ NVS ನ ಸುಮಾರು 100 ವಿದ್ಯಾರ್ಥಿಗಳು, ರಾಜ್ಯ ಮಂಡಳಿ ಮತ್ತುCBSE ವಿದ್ಯಾರ್ಥಿಗಳು “ಪರೀಕ್ಷಾ ಪೆ ಚರ್ಚಾ 2024 (PPC 2024)” ಅಡಿಯಲ್ಲಿ ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಭಾಗವಹಿಸಿದವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಪರಾಕ್ರಮ್ ದಿವಸ್ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ
