Slide
Slide
Slide
previous arrow
next arrow

ಮುನಿ ಮನೀಶಿಗಳು ಅನುಭವಿಸಿದ ಆನಂದದ ಮೂಲ ಶ್ರೀರಾಮ: ಡಾ.ಜಿ.ಎ.ಹೆಗಡೆ

300x250 AD

ಶಿರಸಿ: ಎಲ್ಲಾ ಬಗೆಯ ಮನುಷ್ಯ ಸಹಜ ಪ್ರವೃತ್ತಿಗಳ ನಡುವೆ ಬದುಕಿ ಆದರ್ಶ ಬದುಕಿನ ಮರ್ಯಾದೆಯ ಎಲ್ಲೆಯನ್ನು ಬಿತ್ತರಿಸಿ, ವಿಸ್ತಿರಿಸಿದವನು ಮರ್ಯಾದ ಪುರುಷೋತ್ತಮ ಶ್ರೀರಾಮ. ಮುನಿ ಮನೀಶಿಗಳು ದರ್ಶಿಸಿದ ಆನಂದದ ಸರ್ವ ಮೂಲ ಸ್ವರೂಪ ಶ್ರೀರಾಮ ಎಂದು ಲೇಖಕ, ಯಕ್ಷಗಾನ ವಿದ್ವಾಂಸ ಡಾ. ಜಿ. ಎ. ಹೆಗಡೆ, ಸೋಂದಾ ನುಡಿದರು.

ಅವರು ರಾಮೋಪಾಸನೆಯ ಅಂಗವಾಗಿ ಜ.22ರಂದು ಮಧ್ಯಾಹ್ನ ಕೋಣೆಸರದ ಗಣಪತಿ ನಿಲಯದಲ್ಲಿ ಹೊಂಗಿರಣ ಫೌಂಡೇಶನ (ರಿ) ಏರ್ಪಡಿಸಿದ ‘ರಾಮ ಶ್ರೀರಾಮ’ ಉಪನ್ಯಾಸ ನೀಡುತ್ತಾ ಹೀಗೆ ತಿಳಿಸಿದರು. ಸನಾತನಿಗಳ ಸಾತ್ವಿಕತೆಯ ಅನಾವರಣದಲ್ಲಿ ಶ್ರೀರಾಮನ ನಡೆ-ನುಡಿ ಚರಿತ್ರೆ ಮತ್ತು ಚಾರಿತ್ರ್ಯ ಯುಗಯುಗಗಳಲ್ಲೂ ಜನಜೀವನದ ಮೇಲೆ ಪರಿಣಾಮ ಬೀರಿದ ಕಾರಣಕ್ಕಾಗಿ ‘ರಾಮೋ ವಿಗ್ರಹವಾನ್ ಧರ್ಮಃ’ ಎಂಬ ಮಾತಿನ ವ್ಯಾಖ್ಯಾನಕ್ಕೆ ಹಲವು ದರ್ಶನ ವಿಶೇಷಗಳನ್ನು ನೀಡಿದೆ ಎಂದರು. ಇದೇ ಪುಣ್ಯಪ್ರದ ಗಳಿಗೆಯಲ್ಲಿ ಡಾ.ಜಿ.ಎ.ಹೆಗಡೆ ಸೋಂದಾ ಅವರ 11ನೇ ಕೃತಿ “ನುಡಿಮುತ್ತು ಬಾಯಿ ತುತ್ತು” ಲೇಖಕರ ಮಾತೆ ಮಹದೇವಿ ಅ. ಹೆಗಡೆ ಅವರಿಂದ ಲೋಕಾರ್ಪಣೆಗೊಂಡಿತು. ಪುಸ್ತಕ ಪರಿಚಯಿಸಿದ ಹಿರಿಯ ಲೇಖಕ, ಕವಿ ಮನೋಹರ ಮಲ್ಮನೆ ಜನಪದರ ಜೀವನ ಕ್ರಮವನ್ನು ನೇಯುವ, ತನ್ಮೊಲಕ ಜೀವನ ವಿಧಾನವನ್ನು ಸ್ಪುಟಗೊಳಿಸುವ ಕಾಯಕವನ್ನು ನುಡಿಮುತ್ತುಗಳು ಮಾಡಿವೆ. 155 ನುಡಿಗಟ್ಟುಗಳನ್ನು ಕಟ್ಟಾಗಿಸಿ ಗಟ್ಟಿಯಾಗಿಸಿ ಸೊಗಸಾದ ವಿವರಣೆಯೊಂದಿಗೆ ದೃಷ್ಟಾಂತ, ಕಥೆ, ಆಕರ್ಷಕ ಉದಾಹರಣೆಯೊಂದಿಗೆ ಡಾ. ಹೆಗಡೆ ವ್ಯಾಖ್ಯಾನಿಸಿದ್ದಾರೆ. ಓದುಗರಿಗೆ ರಸದೌತಣವನ್ನು ನೀಡಿದ್ದಾರೆ ಎಂದರು. ಅತಿಥಿ ಮತ್ತು ಹೊಂಗಿರಣ ಫೌಂಡೇಶನ ನಿರ್ದೇಶಕ ಲೈನ ಗುರುರಾಜ ಹೊನ್ನಾವರ ಮಾತನಾಡಿ ನುಡಿಮುತ್ತುಗಳು ನಳನಳಿಸುವ ಹೂವಾಗಿ, ಸುಗಂಧ ಸೂಸುವ ಪುಷ್ಪಗಳಾಗಿ ಜಿ.ಎ.ಹೆಗಡೆ ಸಾಹಿತ್ಯ ಕೃಷಿಯಿಂದ ಅರಳಿ ನಿಂತಿವೆ ಎಂದರು.

300x250 AD

ಇದೇ ಸಂದರ್ಭದಲ್ಲಿ ಕಾರ್ಯಕ್ರಮ ನಿರೂಪಿಸಿದ ಉಪನ್ಯಾಸಕಿ, ಪ್ರತಿಭಾನ್ವಿತ ಲೇಖಕಿ ಸೋಂದಾ ಮೂಲದ ಭವ್ಯಾ ಹಳೆಯೂರು ಅವರನ್ನು ಹೊಂಗಿರಣ ಫೌಂಡೇಶನ ಅಧ್ಯಕ್ಷ ಡಾ.ಜಿ.ಎ.ಹೆಗಡೆ ಸೋಂದಾ ಸನ್ಮಾನಿಸಿ ಶುಭ ಕೋರಿದರು. ಜೀವಾನುಭವದಿಂದ ಬಂದ ಅನುಭವದ ವಾಗ್ವಾನಗಳು ನುಡಿಮುತ್ತುಗಳು ಸಾಹಿತ್ಯ ರಸಗಂಗೆ ಸರಾಗವಾಗಿ, ಸಾಂಗವಾಗಿ, ಹರಿದಾಗ ಅವು ಬಾಯಿ ತುತ್ತುಗಳಾಗಿ ಪರಿಣಮಿಸುತ್ತವೆ ಎಂದು ಲೇಖಕರ ಮಾತಿನಲ್ಲಿ ಡಾ. ಹೆಗಡೆ ನುಡಿದರು. ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸಂಚಲನದ ಅಧ್ಯಕ್ಷ ಕವಿ ಕೃಷ್ಣ ಪದಕಿ ಮಾತಾಡಿ ಜಿ. ಎ. ಹೆಗಡೆಯವರು ಉತ್ತಮ ಶೈಕ್ಷಣಿಕ, ಸಾಹಿತ್ಯಿಕ, ಕಲಾತ್ಮಕ, ಹಿನ್ನಲೆ ಹೊಂದಿದ ತಜ್ಞ ಸಾಹಿತಿಗಳಾಗಿ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಪುಣ್ಯ ಗಳಿಗೆಯಲ್ಲಿ ಮನೆ ಅಂಗಳದಲ್ಲಿ ಉಪನ್ಮಾಸದೊಂದಿಗೆ ಊರವರ ಸಮ್ಮುಖದಲ್ಲಿ ಈ ಕೃತಿ ಲೋಕಾರ್ಪಣೆಗೊಂಡಿದ್ದು ಸಂತಸ ತಂದಿದೆ ಎಂದರು. ಪ್ರಭಾಕರ ಹೆಗಡೆ ಕೋಣೆಸರ ಸಹಕರಿಸಿದರೆ, ರಂಜನಾ ಹೆಗಡೆ ಮೇಲಿನ್ಮನೆ ವಂದನಾರ್ಪಣೆ ಗೈದರು.

Share This
300x250 AD
300x250 AD
300x250 AD
Back to top