ಶಿರಸಿ: ಶ್ರೀರಾಮ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ ಸ್ವರ್ಣವಲ್ಲೀ ಮಠದಲ್ಲಿ ನಡೆದ ‘ಶ್ರೀರಾಮ ಭಕ್ತಿ ಜಾಗರಣ’ ಎಂಬ ನಿರಂತರ 24ಗಂಟೆಗಳ ವಿಶೇಷ ಕಾರ್ಯಕ್ರಮವು ಭಜನೆ, ತಾಳಮದ್ದಲೆಗಳ ಮೂಲಕ ಸಂಭ್ರಮದಲ್ಲಿ ನೆರವೇರಿತು. ಸೋಮವಾರ ಬೆಳಿಗ್ಗೆ 6 ರಿಂದ ಮಂಗಳವಾರ ಬೆಳಿಗ್ಗೆ 6 ರ ವರೆಗೆ ನಡೆದ ಕಾರ್ಯಕ್ರಮದ ಮಂಗಲವನ್ನು ಶ್ರೀರಾಮನಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ತಾಳಮದ್ದಳೆಯ ಮಂಗಳ ಪದ್ಯ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳವರ ಪುಷ್ಪಾರ್ಚನೆಗಳೊಂದಿಗೆ ಅರ್ಪಿಸಲಾಯಿತು. ತನಕ ನಡೆಯಿತು. ಸ್ವರ್ಣವಲ್ಲೀ ಸಂಸ್ಥಾನ, ಯಕ್ಷಶಾಲ್ಮಲಾ ಜಂಟಿಯಾಗಿ ಆಯೋಜಿಸಿತ್ತು.
ಸ್ವರ್ಣವಲ್ಲಿಯಲ್ಲಿ ‘ಶ್ರೀರಾಮ ಭಕ್ತಿ ಜಾಗರಣ’ ಯಶಸ್ವಿ
