Slide
Slide
Slide
previous arrow
next arrow

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ : ಸಿದ್ದಾಪುರದಲ್ಲಿ ಅದ್ದೂರಿ ಕಾರ್ಯಕ್ರಮ

300x250 AD

ಸಿದ್ದಾಪುರ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಂಭ್ರಮ ಮನೆ ಮಾಡಿದೆ. ಪಟ್ಟಣದ ರಾಜಮಾರ್ಗದ ವರ್ತಕರ ಸಂಘದಿಂದ ಶ್ರೀರಾಮನಿಗೆ ವಿಶೇಷ ಹೂವಿನ ಅಲಂಕಾರದ ಜೊತೆಗೆ ವಿದ್ಯುತ್ ದ್ವೀಪದ ಅಲಂಕಾರದೊಂದಿಗೆ ಶೃಂಗರಿಸಲಾಗಿದೆ. ಪ್ರಮುಖ ರಸ್ತೆಗಳು ತಳಿರು ತೋರಣಗಳಿಂದ ಹಾಗೂ ಕೇಸರಿ ಪತಾಕೆಗಳಿಂದ ಶೃಂಗಾರಗೊಂಡಿದೆ. ರಸ್ತೆಯ ಅಲ್ಲಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದ ಬ್ಯಾನರ್, ಬಂಟಿಂಗ್ ಗಳು ರಾರಾಜಿಸುತ್ತಿದ್ದವು. ರಾಜಮಾರ್ಗದ ಕೀರ್ತಿ ಜುವೆಲರ್ ಬಳಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸುಮಾರು 1500 ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಇನ್ನು ಗ್ರಾಮೀಣ ಭಾಗಗಳಲ್ಲೂ ಕೂಡ ದೇವಸ್ಥಾನಗಳಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಹಲವೆಡೆ ಪಾನಕ ಸೇವೆ, ಲಘು ಉಪಹಾರ, ಊಟದ ವ್ಯವಸ್ಥೆ ಕಲ್ಪಿಸಿದ್ದರು.

300x250 AD
Share This
300x250 AD
300x250 AD
300x250 AD
Back to top