ಶಿರಸಿ: ಮಾರುತಿ ಇರುವಲ್ಲಿ ಶ್ರೀ ರಾಮ ಇರುವುದು ವಿಶೇಷ. ಧರ್ಮದಲ್ಲಿ ಭಕ್ತಿಯು ಮುಖ್ಯವಾದುದು. ಪ್ರತಿನಿತ್ಯ ರಾಮಜಪ ಮಾಡುವುದು ತುಂಬ ಮಹತ್ವವಾದುದು. ಸಮಾಜದಲ್ಲಿ ಇದು ಜಾಗ್ರತೆಯನ್ನು ಉಂಟುಮಾಡಿದೆ. ಇಡೀ ದೇಶದಲ್ಲಿ ಇಂದು ರಾಮನಾಮ ಹರಡಿದೆ. ನಾವು ಪ್ರತಿಯೊಬ್ಬರು ಪಾಲ್ಗೊಳ್ಳುವುದು ಅವಶ್ಯ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಯವರು ಹೇಳಿದರು.
ಅವರು ಕೊಳಗಿಬೀಸ್ ಮಾರುತಿ ಮಂದಿರದಲ್ಲಿ ನಡೆದ ರಾಮತಾರಕಜಪ ಯಜ್ಞ ಮತ್ತು ಹವನ ಕಾರ್ಯಕ್ರಮದಲ್ಲಿ ಪೂರ್ಣಾಹುತಿಯಲ್ಲಿ ಪಾಲ್ಗೊಂಡು, ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಿದ್ದಾಪುರ ಶಿರಳಗಿಯ ಬ್ರಹ್ಮಾನಂದ ಸ್ವಾಮೀಜಿಯವರು ಆಶಿರ್ವಚನ ನೀಡಿ ಇಂದಿನ ಅಯೋಧ್ಯೆಯಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮ ಇಡೀ ಜಗತ್ತು ನೋಡುತ್ತಿದೆ. ನಮ್ಮ ಗಾಯತ್ರಿ ಮಂತ್ರ ವಿಶ್ವವನ್ನು ಒಳಗೊಂಡಿದೆ. ಶ್ರೀರಾಮನನ್ನು ಎಷ್ಟು ವರ್ಣಿಸಿದರೂ ಸಾಲದು.ಪ್ರತಿಯೊಂದರಲ್ಲಿಯೂ ರಾಮನಿದ್ದಾನೆ. ವಿಶ್ವಕಲ್ಯಾಣ ರಾಮನ ಸಾನಿಧ್ಯದಿಂದ ಮಾತ್ರ ಸಾಧ್ಯ. ಸನಾತನ ಸಂಸ್ಕತಿ ನಮ್ಮ ಜಗತ್ತಿನ ಆಸ್ತಿಯಾಗಿದೆ. ಎಂತಹ ಪರಿಸ್ಥಿತಿಯಲ್ಲೂ ಸಮತೋಲನ ಕಾಯ್ದುಕೊಂಡು ಇರುವುದೇ ರಾಮನ ತತ್ವವಾಗಿದೆ .ವಿಶ್ವಕ್ಕೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ಶಶಿಭೂಷಣ ಹೆಗಡೆ ಸ್ವಾಗತಿಸಿ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಒಂದೇ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ರಾಮನಾಮ ಬರಹ ನಮ್ಮ ಜಿಲ್ಲೆಯಲ್ಲಿ 18ಕೋಟಿಗೂ ಅಧಿಕವಾಗಿದೆ ಎಂಬುದು ಗಮನಾರ್ಹವಾಗಿದೆ ಎಂದು ಹೇಳಿದರು. ಫಲ ಸಮರ್ಪಣೆಯನ್ನು ಮಾರುತಿ ದೇವಳ, ಗೋಳಿ ಸಿದ್ದವಿನಾಯಕ ದೇವಳ ಅ.ಕ. ಬ್ರಾಹ್ಮಣ ಮಹಾಸಭಾ ಉತ್ತರ ಕನ್ನಡ, ವೈದಿಕ ಪರಿಷತ್ತು ವಿವಿಧ ಧಾರ್ಮಿಕ ಸಂಘಟನೆಯ ಪ್ರತಿನಿಧಿಗಳು ಮಾಡಿದರು . ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, .ಮಾರುತಿ ದೇವಳದ ಅಧ್ಯಕ್ಷ ಶ್ರೀಧರ ಹೆಗಡೆ, ಮುಖ್ಯ ಅರ್ಚಕ ವೇ.ಮೂ. ಕುಮಾರ ಭಟ್ಟ ಹಾಗು ಇತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ವಿಧಾನಸಭೆಯ ಮಾಜಿ ಸಭಾಧ್ಯಕ್ಸ ವಿಶ್ವೇಶ್ವರ ಹೆಗಡೆ ಕಾಗೇರಿ ದೇವಳಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.