ಹಳಿಯಾಳ : ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿ.ಡಿ.ಹೆಗಡೆ ಅವರ 85 ನೇ ಜನ್ಮದಿನದ ಅಂಗವಾಗಿ ಪಟ್ಟಣದ ಶ್ರೀ.ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದೇ ವೇಳೆ ಪಕ್ಕದ ಗಣೇಶ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಯಾವುದೇ ಆಡಂಬರವಿಲ್ಲದೆ ಹಿಂದೂ ಧರ್ಮದ ಸಂಸ್ಕೃತಿಯ ಪ್ರತೀಕವಾಗಿ ದೀಪವನ್ನು ಬೆಳಗುವುದರ ಮೂಲಕ ಸರಳವಾಗಿ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿ.ಡಿ. ಹೆಗಡೆಯವರಿಗೆ ನೂರಾರು ಅಭಿಮಾನಿಗಳು ಉಡುಗೊರೆ ಹಾಗೂ ಹೂಗುಚ್ಛ ಗಳನ್ನು ನೀಡುವುದರ ಮೂಲಕ ಶುಭ ಹಾರೈಸಿದರು. ಜನ್ಮದಿನದ ಕಾರ್ಯಕ್ರಮದ ಕುರಿತು ಅವರ ಸುಪುತ್ರ ಹಾಗೂ ಮಾಜಿ ಶಾಸಕರಾದ ಸುನೀಲ್ ಹೆಗಡೆ ಮಾತನಾಡಿ ನನಗೆ ನನ್ನ ತಂದೆಯವರ ಮಾರ್ಗದರ್ಶನ ಮತ್ತು ಆದರ್ಶ ನನ್ನ ಬೆಳವಣಿಗೆಗೆ ಮಹತ್ವದ ಶಕ್ತಿಯಾಗಿದೆ. ತಂದೆ ಹಾಗೂ ತಮ್ಮ ರಾಜಕೀಯ ಮತ್ತು ಜೀವನದ ಒಡನಾಟವನ್ನು ಸ್ಮರಿಸಿ ಜನ್ಮದಿನದ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ವಿ.ಡಿ.ಹೆಗಡೆ ಅವರ ಪತ್ನಿ ಸುನೀತಾ ಹೆಗಡೆ, ಪುತ್ರ ವಿಷ್ಣು ಹೆಗಡೆ, ಸೊಸೆ ಸುವರ್ಣ ಹೆಗಡೆ, ಮೊಮ್ಮಗ ನಯನ್ ಹೆಗಡೆ, ಆಪ್ತರಾದ ಆರ್.ಕೆ.ಲಾಡ್, ಜಿ.ವಿ.ಬೆಂಗಳೂರು, ಎಂ.ಎಚ್.ಹುರಕಡ್ಲಿ, ಎಂ.ಬಿ.ತೋರಣಗಟ್ಟಿ, ಮಂಗೇಶ ದೇಶಪಾಂಡೆ, ಶ್ರೀಪತಿ ಭಟ್, ನಿತಿನ್ ದೇಶಪಾಂಡೆ, ಉದಯ ಹೂಲಿ, ಭಾಜಪಾ ಅಧ್ಯಕ್ಷರಾದ ಗಣಪತಿ ಕರಂಜೇಕರ, ಪ್ರಮುಖರಾದ ಅನಿಲ್ ಮುತ್ನಾಳೆ, ಶಿವಾಜಿ ನರಸಾನಿ, ವಿ.ಎಂ.ಪಾಟೀಲ್, ಮಂಜುನಾಥ ಪಂಡಿತ, ಶಿವಾಜಿ ಪಾಟೀಲ್, ಮೋಹನ ಬೆಳಗಾಂವಕರ, ವಿಲಾಸ ಯಡವಿ, ಸಚಿನ್ ಹಳ್ಳಿಕೇರಿ, ಪ್ರಶಾಂತ ನಾಯ್ಕ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾಲೇಜು ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.