Slide
Slide
Slide
previous arrow
next arrow

ದಾಂಡೇಲಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ

300x250 AD

ದಾಂಡೇಲಿ : ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಭಾನುವಾರ ಆಚರಿಸಲಾಯಿತು.

ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ, ದಾರ್ಶನಿಕರಾದ ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ನಡೆದರೆ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸಾಧ್ಯ ಎಂದರು. 12ನೇ ಶತಮಾನದ ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಖರಲ್ಲಿ ಒಬ್ಬರಾಗಿದ್ದರು. ಅವರು ನೇರ, ನಿಷ್ಠುರ, ತರ್ಕ ವಚನಗಳಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಶ್ರೇಷ್ಠರಾಗಿದ್ದರು ಎಂದರು

ನಾಟಕಕಾರ ದುಂಡಪ್ಪ ಗೂಳೂರ ಶರಣರ ಬಗ್ಗೆ ಅವರ ಅಧ್ಯಾತ್ಮಿಕ ವಿಚಾರ ಮತ್ತು ವಚನಗಳ ಕುರಿತು ವಿಸ್ತಾರವಾಗಿ ಮಾತನಾಡುತ್ತಾ, ನಿಜಶರಣ ಅಂಬಿಗರ ಚೌಡಯ್ಯನವರು ರಚಿಸಿರುವ ಒಂದೊಂದು ವಚನವು ಪಿಹೆಚ್‍ಡಿಗೆ ಸಮಾನ. ಇಂದು ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳು ಒಗ್ಗೂಡುವ ಅಗತ್ಯತೆ ತುಂಬಾ ಅತ್ಯವಶ್ಯಕವಾಗಿದೆ. ಎಲ್ಲಾ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ನುಡಿದರು. ಶಿವಶರಣ ಅಂಬಿಗರ ಚೌಡಯ್ಯ ಸಮಾಜದ ಪ್ರಮುಖರಾದ ರವಿ ಪೈ ರವರು ಶರಣರ ಕುರಿತು ಮಾತನಾಡಿದರು. ತಾಲೂಕಾಡಳಿತದ ಪರವಾಗಿ ರವಿ ಪೈ ಹಾಗೂ ಮರಿಯಮ್ಮ ಸಿದ್ದಪ್ಪ ಅಂಪೈಯ ಅವರನ್ನು ಸನ್ಮಾ‌ನಿಸಲಾಯಿತು.

300x250 AD

ನಗರ ಸಭೆಯ ಸದಸ್ಯರಾದ ಮಹಾದೇವ ಜಮಾದಾರ್, ಶಿಕ್ಷಕ ಸಿದ್ದಪ್ಪ ಅಗಸಿಮನಿ, ಮುಖಂಡರಾದ ವಿನಾಯಕ‌ ಬಾರೀಕರ್, ಸೇರಿದಂತೆ ಶಿವಶರಣ ಅಂಬಿಗರ ಚೌಡಯ್ಯ ಸಮಾಜ ಬಾಂಧವರು ಹಾಗೂ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top