Slide
Slide
Slide
previous arrow
next arrow

ಅಯೋಧ್ಯೆಯಲ್ಲಿ ದಾಂಡೇಲಿಯ ಬಾಬು ದೊಡ್ಡಮನಿ

300x250 AD

ದಾಂಡೇಲಿ: ಅವರು ಅಪ್ಪಟ ರಾಮಭಕ್ತ. ಆ ಕಾರಣಕ್ಕಾಗಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೋಡಲೇಬೇಕು ಎಂಬ ಆತುರ ಕಾತುರದಿಂದ ಅಯೋಧ್ಯೆಗೆ ಹೊರಟು ಇದೀಗ ಶ್ರೀರಾಮನ ಸನ್ನಿಧಿಯ ಮುಂಭಾಗದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಎದುರು ನೋಡುತ್ತಿರುವ ದಾಂಡೇಲಿಯ ಸಾಹಸಿ ಯುವಕ ಬಾಬು ರಾಮಪ್ಪ ದೊಡ್ಡಮನಿ.

ನಗರದ ಬರ್ಚಿ ರಸ್ತೆಯ ನಿವಾಸಿಯಾಗಿರುವ ಬಾಬು ದೊಡ್ಡಮನಿ, ಅತ್ಯುತ್ತಮ ಕ್ರಿಕೆಟ್ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಧಾರ್ಮಿಕ ಕಾರ್ಯಕ್ರಮದ ಬಗ್ಗೆ ವಿಶೇಷವಾದ ಭಕ್ತಿ ಮತ್ತು ಶ್ರದ್ಧೆಯನ್ನು ಇಟ್ಟುಕೊಂಡಿರುವ ಬಾಬು ದೊಡ್ಡಮನಿಯವರು ರಾಮಭಕ್ತ. ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಹೇಗಾದರೂ ಕಣ್ತುಂಬಿಕೊಳ್ಳಬೇಕೆಂಬ ಉತ್ಕಟ ಬಯಕೆಯನ್ನು ಹೊತ್ತಿ, ಶನಿವಾರ ದಾಂಡೇಲಿಯಿಂದ ಹುಬ್ಬಳ್ಳಿಗೆ ಹೊರಟು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲಿನ ಮೂಲಕ ಪ್ರಯಾಣವನ್ನು ಬೆಳೆಸಿ ಬೆಂಗಳೂರಿನಿಂದ ಲಕ್ನೋಗೆ ವಿಮಾನದ ಮೂಲಕ ತೆರಳಿದ್ದಾರೆ.

ಲಕ್ನೋದಲ್ಲಿ ಬಂದಿಳಿದ ಬಾಬು ದೊಡ್ಡಮನಿಯವರಿಗೆ ಅಲ್ಲಿಂದ 132 ಕಿ.ಮೀ ದೂರದಲ್ಲಿರುವ ಅಯೋಧ್ಯೆಗೆ ತೆರಳುವುದು ಅತಿ ಪ್ರಯಾಸದ ಕೆಲಸವಾಗಿತ್ತು. ಭಾನುವಾರ ನಸುಕಿನ ಸಮಯ 3:30 ಗಂಟೆಗೆ ಲಕ್ನೋದಿಂದ ಅಯೋಧ್ಯೆಗೆ ಪ್ರಯಾಣವನ್ನು ಬೆಳೆಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಲಕ್ನೋದಿಂದ ಅಯೋಧ್ಯೆಯವರೆಗೆ ಯಾವುದೇ ಖಾಸಗಿ ಪ್ರಯಾಣಿಕ ವಾಹನಗಳ ಸಂಚಾರವಿರಲಿಲ್ಲ. ಆದರೂ ಹೇಗಾದರೂ ಸರಿ ಎಂದು ಪಾದಯಾತ್ರೆಯ ಮೂಲಕ ಬಾಬು ದೊಡ್ಡಮನಿಯವರು ಲಕ್ನೋದಿಂದ ಅಯೋಧ್ಯೆಗೆ ತೆರಳಿದರು. ಹೀಗೆ ಹೋಗುತ್ತಿರುವಾಗ ಅಲ್ಲಲ್ಲಿ ಕೆಲವೊಂದು ವಾಹನಗಳನ್ನೇರಿ ಅಯೋಧ್ಯೆಗೆ ಭಾನುವಾರ ಸಂಜೆ 6 ಗಂಟೆಗೆ ತಲುಪಿದ್ದಾರೆ.

300x250 AD

ಸಂಜೆ ಆರೂವರೆ ಗಂಟೆಗೆ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ತಲುಪಿ, ಅಲ್ಲಿಯ ಸದ್ಯದ ದೃಶ್ಯವನ್ನು ಸೆರೆಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ. ಏನೇ ಇರಲಿ, ದೇವರನ್ನು ಕಾಣಬೇಕು ದೇವಸ್ಥಾನಕ್ಕೆ ಹೋಗಬೇಕು ಎಂಬ ಸಂಕಲ್ಪವನ್ನು ತೊಟ್ಟರೆ ಎಷ್ಟೇ ಕಷ್ಟವಾದರೂ ಸರಿ ಸಂಕಲ್ಪ ಈಡೇರುತ್ತದೆ ಎನ್ನುವುದಕ್ಕೆ ಬಾಬು ದೊಡ್ಡಮನಿಯವರು ಕೈಗೊಂಡ ಈ ಅಯೋಧ್ಯೆ ಯಾತ್ರೆಯೆ ಉತ್ತಮ ಉದಾಹರಣೆ ಎನ್ನಬಹುದು.

Share This
300x250 AD
300x250 AD
300x250 AD
Back to top