ಕುಮಟಾ: ನಮೋ ಬ್ರಿಗೇಡ್ ಉತ್ತರಕನ್ನಡ ವತಿಯಿಂದ ತಾಲೂಕಿನ ಕಲವೆ ಗ್ರಾಮದಲ್ಲಿ ಎರಡನೇ ಹಂತದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಭಾರತ ಮಾತಾ ಪೂಜೆಯೊಂದಿಗೆ ಡಾ.ಪ್ರಕಾಶ ಭಟ್, ಡಾ.ಮಲ್ಲಿಕಾರ್ಜುನ ಎಸ್, ಡಾ.ಸಂತೋಷಿ ನಾಯ್ಕ ಹಾಗೂ ಆಶಾ ಕಾರ್ಯಕರ್ತೆಯಾದ ಶ್ರೀಮತಿ ಗೀತಾ ಗೌಡ ಮತ್ತು ಊರಿನ ಹಿರಿಯರಾದ ಹನುಮಂತ ಗೌಡ ತೈಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಆಶಾ ಕಾರ್ಯಕರ್ತೆಯನ್ನು ಸನ್ಮಾನಿಸಿ, ಮೋದಿಜಿಯವರು ಇನ್ನೊಮ್ಮೆ ಪ್ರಧಾನಿಯಾಗಬೇಕು ಹಾಗೂ ಭವ್ಯ ಭಾರತದ ಯಶಸ್ಸು ಹೀಗೆ ಮುಂದುವರೆಯಬೇಕು.ಇದಕ್ಕಾಗಿ ಪ್ರತಿಯೊಬ್ಬರ ಸಹಕಾರ ಅತ್ಯವಶ್ಯ ಎಂದು ಹೇಳಿದರು. ಸುಮಾರು 50 ಕ್ಕೂ ಹೆಚ್ಚು ಜನರು ಈ ಶಿಬಿರದ ಪ್ರಯೋಜನ ಪಡೆದರು.
ಮುಂದಿನ ವಾರಉಚಿತ ಆರೋಗ್ಯ ಶಿಬಿರ ಐಗಳಕುರ್ವೆಯಲ್ಲಿ ನಡೆಯಲಿದ್ದು ಸುತ್ತಮುತ್ತಲಿನ ಜನ ಪ್ರಯೋಜನ ಪಡೆದುಕೊಳ್ಳಬೇಕಾಗಿ ನಮೋ ಬ್ರಿಗೇಡ್ ವಿನಂತಿಸಿದೆ. ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಅಣ್ಣಪ್ಪ ನಾಯ್ಕ, ಆರೋಗ್ಯ ಶಿಬಿರದ ಉಸ್ತುವಾರಿ ರವೀಶ ನಾಯ್ಕ, ಸದಸ್ಯರಾದ ಮಂಜು ಗೌಡ, ಗೌರೀಶ ನಾಯ್ಕ, ಜ್ಯೋತಿ ನಾಯ್ಕ ಹಾಗೂ ರಾಘವೇಂದ್ರ ಮರಾಠಿ ಊರಿನ ಯುವಕರು ಹಾಜರಿದ್ದರು.