ಸಿದ್ದಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ದೈವಜ್ಞ ಕೇರಂ ಪಂದ್ಯಾವಳಿಯಲ್ಲಿ ಸಿದ್ದಾಪುರದ ಪ್ರಶಾಂತ ದತ್ತಾತ್ರೇಯ ಶೇಟ್ ಹಾಗೂ ಕುಮಟಾದ ಸಂತೋಷ ಡಿ.ಶೇಟ್ ಕೇರಂ ಡಬಲ್ಸ್ ಟ್ರೋಫಿ ವಿಜೇತರಾಗಿದ್ದಾರೆ. ಹಾಗೆಯೆ ಪ್ರಶಾಂತ ದತ್ತಾತ್ರೇಯ ಶೇಟ್ ಅವರು ಕೇರಂ ಸಿಂಗಲ್ಸ್ನಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರಿನ ದೈವಜ್ಞ ಯುವಕರ ಸಂಘದ ಅಧ್ಯಕ್ಷ ಮಹೇಶ ಜಿ.ಶೇಟ್, ಬೆಂಗಳೂರು ದೈವಜ್ಞ ಸಂಘದ ಹಿರಿಯ ಸದಸ್ಯ ನಾಗಭೂಷಣ್ ವೆರ್ಣೇಕರ್ ಇತರರು ಬಹುಮಾನ ವಿತರಿಸಿದರು.