ಸಿದ್ದಾಪುರ; ಅಯೋಧ್ಯೆಯಲ್ಲಿ ಜರುಗುತ್ತಿರುವ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠದಲ್ಲಿ ಶ್ರೀ ರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ಮಾರ್ಗದರ್ಶನ ಪಡೆದು ಜ.22 “ಅಕ್ಷರ ಸಹಸ್ರ ಶ್ರೀ ರಾಮತಾರಕ ಹವನ” ಆಯೋಜಿಸಲಾಗಿದೆ. ಚತುರ್‌ದ್ರವ್ಯದಿಂದ ವೈದಿಕರು ಮತ್ತು ಗೃಹಸ್ಥರ ಸಹಕಾರದಿಂದ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು ಅಂದು ಬೆಳಿಗ್ಗೆ 9.30 ರಿಂದ ಗುರುಗಣಪತಿ ಪ್ರಾರ್ಥನೆಯೊಂದಿಗೆ ಹವನ ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಲಿದ್ದು 1.30 ಕ್ಕೆ ಪ್ರಸಾದ ಭೋಜನ ವ್ಯವಸ್ಥೆಯಿದೆ. ಸಂಜೆ 6.30 ರಿಂದ ಭಜನಾ ಕಾರ್ಯಕ್ರಮ, 7.30 ರಿಂದ ತುಪ್ಪದಿಂದ ಸಹಸ್ರ ದೀಪೋತ್ಸವ ಏರ್ಪಡಿಸಲಾಗಿದೆ. ಅಯೋಧ್ಯೆಯಲ್ಲಿ ಜರುಗುವ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ವೀಕ್ಷಿಸುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುತ್ತಿದೆ. ಕಾರ್ಯಕ್ರಮಗಳಲ್ಲಿ ಸಿದ್ದಾಪುರ ಮಂಡಲ ಹಾಗೂ ಸೀಮೆಯ ಯಾವತ್ತೂ ಶಿಷ್ಯ ಭಕ್ತರು ಪಾಲ್ಗೊಂಡು ಶ್ರೀ ಗುರುದೇವತಾ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ರಾಮದೇವ ಭಾನ್ಕುಳಿಮಠದ ಅಧ್ಯಕ್ಷ ಎಂ.ಎಂ.ಹೆಗಡೆ ಮಗೇಗಾರ ಹಾಗೂ ಸಂಘಟಕರು ಕೋರಿದ್ದಾರೆ.