Slide
Slide
Slide
previous arrow
next arrow

ಜನತಾ ವಿದ್ಯಾಲಯ ಪ್ರಾಥಮಿಕ ಶಾಲೆ 25ನೇ ವಾರ್ಷಿಕೋತ್ಸವ ಯಶಸ್ವಿ

300x250 AD

ದಾಂಡೇಲಿ : ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25ನೇ ವರ್ಷದ ವಾರ್ಷಿಕೋತ್ಸವವು ಸಂಭ್ರಮ ಸಡಗರದಿಂದ ಶುಕ್ರವಾರ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ.ಡಿ.ಬಸಾಪುರ, ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವು ಪ್ರತಿಯೊಂದು ಮಗುವಿನ ಶೈಕ್ಷಣಿಕ ಜೀವನದ ಮೊದಲ ಮೆಟ್ಟಿಲು. ಪೂರ್ವ ಮತ್ತು ಪ್ರಾಥಮಿಕ ಶಾಲಾ ದಿನಗಳಲ್ಲಿ ಕೇವಲ ಆಟ – ಪಾಠ ಮಾತ್ರವಲ್ಲದೇ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾನವೀಯ ಮೌಲ್ಯಗಳು, ಆದರ್ಶ ಗುಣ ಸಂಸ್ಕಾರಗಳನ್ನು ಕಲಿಸಿಕೊಡಲಾಗುತ್ತದೆ. ಏನು ಅರಿಯದ ಮಗುವನ್ನು ತಿದ್ದಿತೀಡಿ ಈ ಸಮಾಜದ ಆಸ್ತಿಯನ್ನಾಗಿಸುವ ನಿಟ್ಟಿನಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ಗುರುಗಳ ಸೇವೆ ಅತ್ಯಂತ ಮೌಲ್ಯಯುಕ್ತವಾದ ಸೇವೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆಯ ಸದಸ್ಯ ಪದ್ಮಜಾ ಪ್ರವೀಣ್ ಜನ್ನು, ಇಲ್ಲಿಯ ಶಾಲೆಯ ಗುರುಗಳ ಶೈಕ್ಷಣಿಕ ಕ್ರಿಯಾಶೀಲತೆ ಮತ್ತು ಕಲಿಸುವ ರೀತಿ ಅತ್ಯುತ್ತಮವಾಗಿದೆ.‌ ಕನ್ನಡ ಶಾಲೆಯಾದರೂ ಆಂಗ್ಲ ಮಾಧ್ಯಮ ಶಾಲೆಯನ್ನು ಮೀರಿ ನಿಲ್ಲುವಷ್ಟು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಿರುವುದು ಶ್ಲಾಘನೀಯ ಎಂದರು.

300x250 AD

ಜನತಾ ವಿದ್ಯಾಲಯ ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ದೆವದಿತ್ ರೀಟಾ ಡಾಯಸ್ ಮಾತನಾಡಿ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯು ದಿನಕರ ದೇಸಾಯಿ ಅವರ ಆಶಯ ಹಾಗೂ ಸಂಕಲ್ಪದಂತೆ ಶೈಕ್ಷಣಿಕ ಸೇವೆಯಲ್ಲಿ ತನ್ನನ್ನು ತಾನು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದೆ. ಒಂದು ಶಾಲೆ ಬೆಳಗಬೇಕಾದರೆ ಶಿಕ್ಷಕರ ಸೇವೆಯ ಜೊತೆಗೆ ಮಕ್ಕಳ ಮತ್ತು ಪಾಲಕರ ಭಾಗವಹಿಸುವಿಕೆಯು ಅತಿ ಮುಖ್ಯ. ಈ ಶಾಲೆಯ ಪ್ರತಿಯೊಂದು ಚಟುವಟಿಕೆಗಳಿಗೂ ವಿದ್ಯಾರ್ಥಿಗಳ ಜೊತೆಗೆ ಪಾಲಕರು ಅಭಿಮಾನದಿಂದ ಸ್ಪಂದಿಸುತ್ತಿದ್ದಾರೆ ಎಂದರು. ಶಾಲೆಯ ಶಿಕ್ಷಕರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ ಎಂದರು. ಜೆವಿಡಿಯ ಪ್ರಾಚಾರ್ಯ ಎಂ.ಎಸ್.ಇಟಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯನಿ ನಂದಿನಿ ನಾಯ್ಕ ಅವರು ವಹಿಸಿ ಮಾತನಾಡುತ್ತಾ, ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಮಾರ್ಗದರ್ಶನ ಶಾಲೆಯ ಪ್ರಗತಿಗೆ ಬಹುಮೂಲ್ಯ ಕೊಡುಗೆಯನ್ನು ನೀಡಿದೆ. ಪಾಲಕರು, ವಿದ್ಯಾರ್ಥಿಗಳ ಪ್ರೋತ್ಸಾಹ, ಶಿಕ್ಷಕರ ಸಹಕಾರದಿಂದ ಶೈಕ್ಷಣಿಕವಾಗಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ವೇದಿಕೆಯಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಬಿ.ಎಡ್ ಕಾಲೇಜಿನ‌ ಪ್ರಾಚಾರ್ಯೆ ಸಹನಾ ಸೂರ್ಯವಂಶಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂದಿನಿ ನಾಯ್ಕ ಸ್ವಾಗತಿಸಿದರು. ಸುಷ್ಮಾ ನಾಯ್ಕ ಮತ್ತು ಮಂಜುನಾಥ್ ಕಾದ್ರೊಳ್ಳಿ ಬಹುಮಾನ ವಿಜೇತರ ಹೆಸರನ್ನು ಹೇಳಿದರು. ಮೀನಾಕ್ಷಿ ಗಸ್ತಿ ವಂದಿಸಿದರು. ಸವಿತಾ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಪೂರ್ವ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.

Share This
300x250 AD
300x250 AD
300x250 AD
Back to top