ಶಿರಸಿ: ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳದ ಸಂಲಗ್ನತೆ ಹಾಗೂ ಪರೀಕ್ಷಾ ಕೇಂದ್ರದ ಮಾನ್ಯತೆ ನಗರದ ಸಂಹಿತಾ ಮ್ಯೂಸಿಕ್ ಫೋರಂಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆಸಕ್ತ ಅರ್ಹ ವಿದ್ಯಾರ್ಥಿಗಳು ಏಪ್ರಿಲ್ ಅವಧಿಯ ಪರೀಕ್ಷೆಗೆ ಈ ಸಂಸ್ಥೆಯ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸ್ವರಋಷಿ ನಾದಲೀನ ಪಂ.ವಿಷ್ಣು ದಿಗಂಬರ ಪಲುಸ್ಕರರಿಂದ ಸ್ಥಾಪಿತಗೊಂಡ, ಭಾರತೀಯ ಸಂಗೀತ ನೃತ್ಯ ಪ್ರಕಾರಗಳ ಅಧಿಕೃತ ಶಿಕ್ಷಣ ಹಾಗೂ ಪರೀಕ್ಷೆಗಳಿಗೆ ಅಧಿಕೃತ ವೇದಿಕೆಯನ್ನು ದೇಶ ವಿದೇಶಗಳಲ್ಲಿ ಪ್ರಪ್ರಥಮವಾಗಿ ಪರಿಚಯಿಸಿ ವ್ಯವಸ್ಥಿತಗೊಳಿಸಿದ, ಕೇಂದ್ರ ಸರಕಾರ ಹಾಗೂ ಯುಜಿಸಿಯಿಂದ ಅನುಮೋದಿತ ,ದೇಶ ವಿದೇಶಗಳಲ್ಲಿ ಆದ್ಯತೆ ಮಾನ್ಯತೆ ಹೊಂದಿದ ಗಂಧರ್ವ ಮಹಾವಿದ್ಯಾಲಯ ಮಂಡಳದ ಮಾನ್ಯತೆಯ ಪರೀಕ್ಷಾ ಕೇಂದ್ರ ಇದಾಗಿದ್ದು, ಹೆಚ್ಚಿನ ಮಾಹಿತಿಗೆ ಸಂಹಿತ ಮ್ಯೂಸಿಕ್ ಫೋರಂನ ಪ್ರಾಚಾರ್ಯ ಅನಂತ ಹೆಗಡೆ ವಾಜಗಾರ (tel:+919731095085) ಅವರನ್ನು ಸಂಪರ್ಕಿಸಬಹುದು.